×
Ad

ಅಫಜಲಪುರ | ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ

Update: 2025-12-25 23:24 IST

ಅಫಜಲಪುರ : ಪಟ್ಟಣದ ಮದರ್ ತೆರೇಸಾ ಪದವಿ ಪೂರ್ವ ಕಲಾ ಮಹಾವಿದ್ಯಾಲಯದಲ್ಲಿ 2026ನೇ ಸಾಲಿನ ಕಾಲೇಜಿನ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಆರ್.ಎಸ್. ನಂದೂರ ಗುಂಡೆರಾವ್ ದೇಶಮುಖ, ಸುರೇಶ್ ಘಂಟೆ, ಪತ್ರಕರ್ತ ಸಿದ್ದು ಶಿವಣಗಿ ಸಾಂಚಿ ಕಾಲೇಜಿನ ಪ್ರಾಂಶುಪಾಲ ಚಂದ್ರಕಾಂತ ಸಿಂಗೆ ಆನೂರ ಹಾಗೂ ಮಧ್ವರ್ ತೆರೇಸಾ ಸಂಸ್ಥೆ ಅಧ್ಯಕ್ಷ ಸಲೀಂ ಶೇಖ್ ಅವರು ಜಂಟಿಯಾಗಿ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಕ್ಯಾಲೆಂಡರ್ ಬಿಡುಗಡೆ ನಂತರ ಮಾತನಾಡಿದ ಮದರ್ ತೆರೇಸಾ ಸಂಸ್ಥೆ ಅಧ್ಯಕ್ಷ ಸಲೀಂ ಶೇಖ್ ಅವರು, ಶೈಕ್ಷಣಿಕ ಚಟುವಟಿಕೆಗಳನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಕ್ಯಾಲೆಂಡರ್ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಜತೆಗೆ ಸರ್ವತೋಮುಖ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿದ್ದು, ಅವುಗಳನ್ನು ಸಮರ್ಪಕವಾಗಿ ರೂಪಿಸಲು ಈ ಕ್ಯಾಲೆಂಡರ್ ಸಹಕಾರಿಯಾಗಲಿದೆ ಎಂದು ಹೇಳಿದರು.

ಪತ್ರಕರ್ತರಾದ ಸಿದ್ದು ಶಿವಣಗಿ ಮಾತನಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News