Kalaburagi | ಅ.31ರಂದು ಚಿತ್ತಾಪುರಕ್ಕೆ 70ನೇ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ
ಶ್ರೀಕಾಂತ್ ಶಿಂಧೆ
ಕಲಬುರಗಿ: ಅ.31ರಂದು ಪಟ್ಟಣದ ಯರಗಲ್ ಕ್ರಾಸ್‌ನಲ್ಲಿ 70ನೇ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆಗೆ ಸ್ವಾಗತ ಕೋರಲಾಗುವುದು ಎಂದು ಮುಖಂಡ ಶ್ರೀಕಾಂತ್ ಶಿಂಧೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರ್ನಾಟಕದಾದ್ಯಂತ ಸಂಚರಿಸುತ್ತಿರುವ ಧಮ್ಮ ಜನಜಾಗೃತಿ ಯಾತ್ರೆ ಚಿತ್ತಾಪುರಕ್ಕೆ ಆಗಮಿಸಲಿದೆ. ಯಾತ್ರೆಯನ್ನು ವಿಶೇಷವಾಗಿ ಬೈಕ್ ರ‍್ಯಾಲಿ ಮೂಲಕ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಂದು ಬೆಳಗ್ಗೆ 11 ಗಂಟೆಗೆ ಯರಗಲ್ ಕ್ರಾಸ್‌ನಿಂದ ಆರಂಭವಾಗುವ ಯಾತ್ರೆಯು ಹೋಳಿಕಟ್ಟಾ, ಕಪಡಾ ಬಜಾರ್, ಜನತಾ ಚೌಕ್, ಭುವನೇಶ್ವರಿ ಚೌಕ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಅಂಬೇಡ್ಕರ್ ನಗರವನ್ನು ಪ್ರವೇಶಿಸಲಿದೆ. ಬಳಿಕ ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.