Kalaburagi | ಜಿಲ್ಲೆಯಾದ್ಯಂತ ಶೇ.98.64ರಷ್ಟು ಗಣತಿ ನಮೂನೆ ವಿತರಣೆ: ಡಿಸಿ ಇಕ್ರಮ್ ಶರೀಫ್
Update: 2026-07-14 20:07 IST
ಕಲಬುರಗಿ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ಜಿಲ್ಲೆಯಾದ್ಯಂತ ಮಂಗಳವಾರದ ಅಂತ್ಯಕ್ಕೆ ಒಟ್ಟು 23,71,542 ಮತದಾರರ ಪೈಕಿ 23,39,201 (ಶೇ.98.64)ರಷ್ಟು ಗಣತಿ ನಮೂನೆ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ಇದುವರೆಗೆ ಬಿ.ಎಲ್.ಓ. ಗಳು 7,12,758 (ಶೇ.30.05) ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆ ಪಡೆದು ಮೊಬೈಲ್ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಿದ್ದಾರೆ. ಇನ್ನು 5,522 (ಶೇ.0.23) ಮತದಾರರು ಸ್ವಯಂ ಪ್ರೇರಿತವಾಗಿ ಆನ್ ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಿದ್ದಾರೆ. ಬಿ.ಎಲ್.ಓ. ಗಳು ಮನೆ-ಮನೆ ಭೇಟಿ ಕೊಟ್ಟಾಗ ಇಲ್ಲಿಯವರೆಗೆ 273 ಮತದಾರರು ಮನೆಯಲ್ಲಿ ಇಲ್ಲದಿರುವ (ಗೈರು), 6,452 (ಶೇ.0.22) ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಮತ್ತು 7,274(ಶೇ.0.31) ಜನ ಮತದಾರರು ನಿಧನ ಹೊಂದಿರುವ ಬಗ್ಗೆ ವರದಿಯಾಗಿದೆ.