×
Ad

Kalaburagi | ಜಯಕರ್ನಾಟಕ ಜನಪರ ವೇದಿಕೆಗೆ ನೂತನ ಪದಾಧಿಕಾರಿಗಳ ನೇಮಕ

ಕಲಬುರಗಿ ಜಿಲ್ಲಾ ಅಧ್ಯಕ್ಷರಾಗಿ ಅರುಣ್ ಕುಮಾರ್ ನಾಮದಾರ ಆಯ್ಕೆ

Update: 2026-07-14 20:01 IST

ಕಲಬುರಗಿ : ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಜೆ. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಕಲಬುರಗಿಯಲ್ಲಿ ನಡೆದ ಸಂಘಟನೆ ಬಲವರ್ಧನೆ ಸಭೆಯಲ್ಲಿ ಜಿಲ್ಲಾ ಹಾಗೂ ವಿವಿಧ ತಾಲೂಕು ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಸಭೆಯಲ್ಲಿ ಅರುಣ್ ಕುಮಾರ್ ನಾಮದಾರ ಅವರನ್ನು ಕಲಬುರಗಿ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಜಿಲ್ಲಾ ಉಪಾಧ್ಯಕ್ಷರಾಗಿ ಅಕ್ಷಯ್ ನಾಲ್ವಡೆ ಹಾಗೂ ಸದಾಶಿವ ಕ್ಷತ್ರಿಯ ಅವರನ್ನು ಆಯ್ಕೆ ಮಾಡಲಾಯಿತು.

ಅಫಜಲಪುರ ತಾಲೂಕು ಅಧ್ಯಕ್ಷರಾಗಿ ಮುತ್ತು ಕುರಿಮಣಿ, ಕಾಳಗಿ ತಾಲೂಕು ಗೌರವಾಧ್ಯಕ್ಷರಾಗಿ ವಿಕ್ರಂ ನಾಮದಾರ, ತಾಲೂಕು ಅಧ್ಯಕ್ಷರಾಗಿ ಸಚಿನ್ ಆರ್. ಚೆಂಗಟ ಹಾಗೂ ತಾಲೂಕು ಉಪಾಧ್ಯಕ್ಷರಾಗಿ ಲಿಂಗರಾಜ್ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.

ಇದೇ ವೇಳೆ ಸುಜೇಂದ್ರ ಇಜಾರಿ ಅವರನ್ನು ಕಲಬುರಗಿ ಜಿಲ್ಲಾ ಜವಾಬ್ದಾರಿಯಾಗಿ ರಾಜ್ಯ ನಾಯಕತ್ವ ನೇಮಕ ಮಾಡಿದೆ.

ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಜೆ. ಶ್ರೀನಿವಾಸ್, “ಸಂಘಟನೆ ವ್ಯಕ್ತಿಗಿಂತ ದೊಡ್ಡದು. ಶಿಸ್ತು, ನಿಷ್ಠೆ ಹಾಗೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ, ಸಂಘಟನೆಯನ್ನು ಗ್ರಾಮ ಮಟ್ಟದಿಂದ ಜಿಲ್ಲಾಮಟ್ಟದವರೆಗೆ ಇನ್ನಷ್ಟು ಬಲಪಡಿಸಬೇಕು” ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ರಾಮಚಂದ್ರಪ್ಪ, ರಾಜ್ಯ ಸಮಿತಿ ಸಲಹೆಗಾರ ಉಮೇಶ್ ಬೀರಬಿಟ್ಟೆ, ರಾಜ್ಯ ಉಪಾಧ್ಯಕ್ಷ ಹಾಲಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ರೆಡ್ಡಿ, ರಾಜ್ಯ ಕಾರ್ಯದರ್ಶಿ ನವೀನ್ ಬತಲಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News