×
Ad

Kalaburagi | ವಿವಿಧ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

Update: 2026-07-02 17:20 IST

ಕಲಬುರಗಿ: ಕಲಬುರಗಿ ಎಸ್.ಬಿ.ಐ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಉಚಿತವಾಗಿ ಈ ಕೆಳಕಂಡ ದಿನಾಂಕಗಳoದು ವಿವಿಧ ತರಬೇತಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಎಸ್.ಬಿ.ಐ. ಆರ್‌ಸೆಟ್ ನಿರ್ದೇಶಕರು ತಿಳಿಸಿದ್ದಾರೆ.

ಜು.16 ರಿಂದ ಆ.16 ರವರೆಗೆ ದ್ವಿಚಕ್ರ ವಾಹನ ತರಬೇತಿ ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಕೆಗೆ ಜು.15 ರಂದು ಕೊನೆಯ ದಿನವಾಗಿದೆ. ಜು.13 ರಿಂದ 25 ರವರೆಗೆ ಕೃಷಿ ಉದ್ಯಮಿ (ಕುರಿ ಮತ್ತು ಆಡು ಸಾಕಾಣಿಕೆ, ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ) ತರಬೇತಿ ನೀಡಲಿದ್ದು, ಅರ್ಜಿ ಸಲ್ಲಿಕೆಗೆ 2026ರ ಜು.12 ರಂದು ಕೊನೆಯ ದಿನವಾಗಿದೆ.

ಜು.25 ರಿಂದ ಆ.8 ರವರೆಗೆ ಸಿ.ಸಿ.ಟಿ.ವಿ. ಇನ್ಸ್ಟಾಲೇಶನ್ ಮತ್ತು ಸರ್ವೀಸ್, ಸ್ಮೋಕ್ ಡಿಟೇಕ್ಟರ್ ತರಬೇತಿ ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಕೆಗೆ ಜು.24 ರಂದು ಕೊನೆಯ ದಿನವಾಗಿದೆ. ಜು.20 ರಿಂದ ಆ.20 ರವರೆಗೆ ಎಲೆಕ್ಟ್ರಿಕ್ ಮೋಟಾರ್‌, ರಿವೈಡಿಂಗ್ ಮತ್ತು ಪಂಪ್‌ಸೆಟ್ ರಿಪೇರಿ ಸರ್ವೀಸ್ ತರಬೇತಿ ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಕೆಗೆ ಜು.19 ರಂದು ಕೊನೆಯ ದಿನವಾಗಿದೆ.

ಈ ತರಬೇತಿ ಸಂದರ್ಭದಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುತ್ತದೆ. ಕನಿಷ್ಠ ಕನ್ನಡ ಓದಲು ಮತ್ತು ಬರೆಯಲು ಬರಬೇಕು.ವಯೋಮಿತಿ 18 ರಿಂದ 50 ವರ್ಷದೊಳಗಿನ ಬಿ.ಪಿ.ಎಲ್., ಅಂತ್ಯೋದಯ ರೇಷನ್, ಎಮ್‌ಜಿಎನ್‌ಆರ್‌ಇಜಿಎ ಕಾರ್ಡ್ ಹೊಂದಿದ ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳು ಸಂಸ್ಥೆಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಮೇಲ್ಕಂಡ ಕೊನೆಯ ದಿನಾಂಕದೊಳದಾಗಿ ಅರ್ಜಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತರಬೇತಿ ಸಂಸ್ಥೆಯನ್ನು ಹಾಗೂ ಮೊಬೈಲ್ ಸಂಖ್ಯೆ 9900135705, 7019939996, 9901694389, 9901098123 ಹಾಗೂ 9448994585 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News