ಕಲಬುರಗಿ | ಮುಸ್ಲಿಂ ಬಡಾವಣೆಗಳಿಗೆ ನುಗ್ಗಲು ಯತ್ನಿಸಿದ ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಬಜರಂಗದಳದ ಕಾರ್ಯಕರ್ತರು ಪೊಲೀಸರ ವಶಕ್ಕೆ
Update: 2025-06-06 21:40 IST
ಕಲಬುರಗಿ: ಗೋವುಗಳ ರಕ್ಷಣೆಯ ಹೆಸರಲ್ಲಿ ಮುಸ್ಲಿಂ ಬಡಾವಣೆಗಳಿಗೆ ನುಗ್ಗಲು ಯತ್ನಿಸಿದ ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್ ಮತ್ತು ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ ನಡೆದಿದೆ.
ನಗರದ ಜಗತ್ ವೃತದಲ್ಲಿ ಬಿಜೆಪಿ ಮುಖಂಡ ಚಂದು ಪಾಟೀಲ್ ನೇತೃತ್ವದಲ್ಲಿ ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಗೋವುಗಳ ರಕ್ಷಣೆ ಮಾಡಬೇಕೆಂದು ಆಗ್ರಹಿಸಿದರು.
ಮುಸ್ಲಿಂ ಬಡಾವಣೆಗಳಲ್ಲಿ ನಾಳೆ ಬಕ್ರೀದ್ ಪ್ರಯುಕ್ತ ಗೋವುಗಳ ತಂದಿದ್ದಾರೆ. ಅವುಗಳನ್ನು ಪೊಲೀಸರು ರಕ್ಷಿಸಲು ಸಾಧ್ಯವಾಗದ್ದಿದರೆ ನಾವೇ ಅವುಗಳನ್ನು ರಕ್ಷಣೆ ಮಾಡುವುದಾಗಿ ದರ್ಗಾ ರಸ್ತೆಯಲ್ಲಿರುವ ಸಂಗತ್ರಾಶ್ ವಾಡಿ ಕಡೆಗೆ ಬಜರಂಗದಳದ ಕಾರ್ಯಕರ್ತರು ನುಗ್ಗಲು ಮುಂದಾದಾಗ ಪೊಲೀಸರು ಬಾಬಾ ಹೌಸ್ ವೃತದಲ್ಲಿ ಚಂದು ಪಾಟೀಲ್ ಮತ್ತಿತರ ಕಾರ್ಯಕರ್ತರನ್ನು ವಶಕ್ಕೆ ಪಡೆದರು.