×
Ad

ಕಲಬುರಗಿ | ಬ್ಲಾಕ್ ಕಾಂಗ್ರೆಸ್ ಕಮಿಟಿ ಪದಾಧಿಕಾರಿಗಳ ಸಭೆ

Update: 2024-11-04 21:25 IST

ಕಲಬುರಗಿ : ಅಫಜಲಪುರ ಶಾಸಕ ಎಂ.ವೈ. ಪಾಟೀಲ್ ಹಾಗೂ ಕೆಪಿಸಿಸಿ ಸದಸ್ಯ ಅರುಣಕುಮಾರ್ ಎಂ.ವೈ.ಪಾಟೀಲ್ ಅವರ ಸೂಚನೆ ಮೇರೆಗೆ ನಗರದ ಮದರ್ ತೆರೆಸಾ ಹೈಸ್ಕೂಲ್ ಸಭಾಂಗಣದಲ್ಲಿ ಭಾನುವಾರ ಸಂಜೆ ಕಲಬುರಗಿ ತಾಲೂಕಿನ ಫರಹತಾಬಾದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಶಾಕ ಪಟೇಲ್ ವಕೀಲರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಸಭೆ ನಡೆಯಿತು.

ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಗ್ರಾಮ ಪಂಚಾಯತ್ ಉಪಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಬಗ್ಗೆ ಚರ್ಚಿಸಲಾಯಿತು. ಅಲ್ಲದೆ ಪಕ್ಷಕ್ಕೆ ಹಗಲಿರುಳು ಶ್ರಮವಹಿಸಿದ ನಿಷ್ಠಾವಂತ ಕಾರ್ಯಕರ್ತರಿಗೆ ಜವಾಬ್ದಾರಿ ನೀಡುವ ಬಗ್ಗೆಯೂ ಸಲಹೆಗಳು ಕೇಳಿ ಬಂದವು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಯಲೀಸ ಬುಳ್ಳಾ, ಖಜಾಂಚಿ ಶರಣಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಶ್ಫಾಕ್, ಸಂತೋಷಕುಮಾರಿ.ಎಂ ಖರ್ಗೆ, ಕಾರ್ಯದರ್ಶಿ ಶಿವರುದ್ರಪ್ಪ, ಬಸವಲಿಂಗ ಹಾಲು, ಕಾರ್ಯಕಾರಿ ಸದಸ್ಯರುಗಳಾದ ಶಿವಶರಣಪ್ಪ ಗೊರೂರು, ಮನೋಜ ಸಜ್ಜನ, ಆರತಿ ನಾಗರಾಜ, ದೇವಕ್ಕಿ ಬಸವರಾಜ, ಚೋಚಲಪ್ಪ ಪೂಜಾರಿ, ಪ್ರಕಾಶ್ ಪಾಟೀಲ್, ವಾಹಿದ ಸಾಬ್ ಕೌಲಗಾ, ಜಟ್ಟೇಪ್ಪ ಬಸನಾಳ, ಮರೆಮ್ಮ ಸಂಜಿವಕುಮಾರ, ಮಹಾನಂದ ಭೀಮಾಶಂಕರ ಪಾಟೀಲ, ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಸಂಧ್ಯಾ ಪವಾರ ಸೇರಿ ಅನೇಕರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News