×
Ad

ಕಲಬುರಗಿ| ಬದಲಿ ನೌಕರರನ್ನು ಹೊರ ಹಾಕುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

Update: 2025-12-05 21:26 IST

ಕಲಬುರಗಿ: ಅಫಜಲಪುರ ಸರಕಾರಿ ಆಸ್ಪತ್ರೆಯಲ್ಲಿ ಬದಲಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಕೂಡಲೇ ಹೊರಹಾಕಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಆಸ್ಪತ್ರೆಯಲ್ಲಿ ಬಹುತೇಕ ನೌಕರರು ಕೆಲಸಕ್ಕೆ ಹಾಜರಾಗದೆ ಅವರ ಬದಲಾಗಿ ಮತ್ತೊಬ್ಬರನ್ನು ಕೂಲಿ ಕೊಟ್ಟು ಕೆಲಸ ಮಾಡಿಸುವುದು ಕಂಡು ಬರುತ್ತಿದೆ. ಇದನ್ನು ಕೂಡಲೇ ತಡೆಗಟ್ಟಬೇಕು. ಆರೋಗ್ಯ ಇಲಾಖೆಯಿಂದ ಆದೇಶ ಪಡೆದ ನೌಕರರೇ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಆಸ್ಪತ್ರೆಯಲ್ಲಿ ಹೆರಿಗೆಯಾದ ಬಾಣಂತಿಯರಿಗೆ ಆಸ್ಪತ್ರೆಯಲ್ಲಿ ಇರುವಷ್ಟು ದಿನ ಪೌಷ್ಟಿಕ ಆಹಾರವನ್ನು ಪೂರೈಸುವಂತೆ ವ್ಯವಸ್ಥೆ ಮಾಡಬೇಕು. ಆಸ್ಪತ್ರೆಗೆ ಅತ್ಯಂತ ಅವಶ್ಯಕವಾದ ತಾಂತ್ರಿಕ ಸೌಲಭ್ಯಗಳನ್ನು ಮತ್ತು ಯಂತ್ರೋಪಕರಣಗಳನ್ನು ತಕ್ಷಣ ಒದಗಿಸಬೇಕು. ಆಮ್ಲಜನಕ ಸಿಲಿಂಡರ್ ವ್ಯವಸ್ಥೆ ಮತ್ತು ಡಯಾಲಿಸಿಸ್ ವ್ಯವಸ್ಥೆಯನ್ನು ಕೂಡಲೇ ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಮಾತನಾಡಿದ ಕರವೇ ತಾಲೂಕು ಘಟಕದ ಅಧ್ಯಕ್ಷ ಶ್ರೀಕಾಂತ್ ದಿವಾಣಜಿ, ಇತ್ತೀಚೆಗೆ ಈ ಆಸ್ಪತ್ರೆ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಹೆರಿಗೆ ಮಾಡಿದ ಸಾಧನೆ ಬಗ್ಗೆ ಮಾಧ್ಯಮಗಳಲ್ಲಿ ಹೊಗಳಿಕೆ ವ್ಯಕ್ತವಾಗಿತ್ತು. ಆದರೆ ಒಳಗಡೆ ಇಂಥ ಅವ್ಯವಸ್ಥೆ ಇರುವುದು ದುರಾದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಿಗೆ, ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅಫಜಲಪುರ ತಾಲೂಕಿನ ತಹಶೀಲ್ದಾರರ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು.

ಕರವೇ ಮಹಿಳಾ ತಾಲೂಕಾದ್ಯಕ್ಷರಾದ ಸೌಮ್ಯ ಪಟ್ನೇ, ಮಹಿಳಾ ಮುಖಂಡರಾದ ವೈಶಾಲಿ ಬಾಗೇವಾಡಿ , ಕರವೇ ಉಪಾಧ್ಯಕ್ಷರಾದ ಲತೀಫ್ ಪಟೇಲ್, ಅತನೂರ ವಲಯ ಅಧ್ಯಕ್ಷರಾದ ಇಮಾಮ ಶೇಖ್‌, ಕರಜಗಿ ವಲಯ ಅಧ್ಯಕ್ಷರಾದ ಸೋಮು ನಾಯಿಕೋಡಿ, ಅಮಿನಪ್ಪ ಸುಲ್ತಾನಪುರ, ಬಡದಾಳದ ಶರಣು ಬಳೂರ್ಗಿ, ಪ್ರಕಾಶ ಖೈರಾಟ, ತಾಲೂಕು ರೈತ ಘಟಕದ ಅಧ್ಯಕ್ಷ ಮನ್ಸೂರ ಪಟೇಲ್‌, ಮಲ್ಲಪ್ಪ ಮರಬಿ, ಸಿದನೂರದ ಲಕ್ಷೀಪುತ್ರ ನಿಂಬಾಳ, ಮಹಿಬೂಬ, ದತ್ತು ಜಮಾದಾರ, ಬಾಬು ಪೂಜಾರಿ ಮತ್ತು ಹಲವಾರು ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News