×
Ad

ಕಲಬುರಗಿ | ಬುದ್ದ ವಿಹಾರದಲ್ಲಿ ಬುದ್ದ ಪೂರ್ಣಿಮಾ ದಿನಾಚರಣೆ

Update: 2025-05-11 20:17 IST

ಕಲಬುರಗಿ : ನಗರದ ಸೇಡಂ ರಸ್ತೆಯಲ್ಲಿರುವ ಬುದ್ದ ವಿಹಾರದಲ್ಲಿ ಮೇ 12 ರಂದು ಬೆಳಿಗ್ಗೆ 10 ಗಂಟೆಗೆ 2569ನೇ ವೈಶಾಖ ಬುದ್ಧ ಪೂರ್ಣಿಮಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದ್ದು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಲಿದ್ದಾರೆ.

ಸಿದ್ದಾರ್ಥ ವಿಹಾರ ಟ್ರಸ್ಟ್ ನಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಹಾಬೋಧಿ ಸಂಸ್ಥೆಯ ಪೂಜ್ಯ ಭಂತೇ ಧಮ್ಮದತ್ತ ಥೇರಾ ಅವರು ಬುದ್ದ ವಂದನೆ ಸಲ್ಲಿಸಿ ಪ್ರವಚನ ನೀಡಲಿದ್ದಾರೆ. ಅತಿಥಿ ಉಪನ್ಯಾಸಕರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಆಗಮಿಸುವರು.

ಸಾಂಸ್ಕೃತಿಕ ಸಂಜೆ :

ಬುದ್ದ ಪೂರ್ಣಿಮಾ ದಿನಾಚರಣೆ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಬುರಗಿ ರಂಗಾಯಣ ಹಾಗೂ ಸಿದ್ದಾರ್ಥ ವಿಹಾರ ಟ್ರಸ್ಟ್ ನಿಂದ ಸಂಜೆ 6 ಗಂಟೆಗೆ ಬುದ್ದ ವಿಹಾರದ ಬಯಲು ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಸಿದ್ದಾರ್ಥ ಚಿಮ್ಮಾಇದ್ಲಾಯಿ ಹಾಗೂ ಸಂಗಡಿಗರಿಂದ ಗೀತ ಗಾಯನ, ವಿನ್ಯಾಸ ಧರ್ಮಗಿರಿ ಮತ್ತು ವಿದ್ಯಾರ್ಥಿನಿಯರಿಂದ ಧಮ್ಮಗೀತೆಗಳ ಮೇಲೆ‌ ಸಮೂಹ ನೃತ್ಯ ನಡೆಯಲಿದೆ. ಇದಲ್ಲದೆ ಶಿವಲಿಂಗಯ್ಯ ನಿರ್ದೇಶನದ ಮತ್ತು ಇಸ್ಮಾಯಿಲ್ ಗೋನಾಳ ಅವರ ಸಂಗೀತ ನಿರ್ವಹಣೆಯ "ಮಹಾಪೌರ್ಣಿಮೆ" (ಅಮ್ರಪಲಿ ಜೀವನ ಆಧಾರಿತ) ನಾಟಕವನ್ನು ಮಂಡ್ಯದ ಗೌತಮಿ ಫೌಂಡೇಷನ್ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News