×
Ad

ಕಲಬುರಗಿ | ಕಾರು-ಬೈಕ್ ಮಧ್ಯೆ ಢಿಕ್ಕಿ : ಸವಾರರಿಬ್ಬರು ಮೃತ್ಯು

Update: 2025-11-16 18:56 IST

ಮೃತರು

ಕಲಬುರಗಿ: ಕಾರು- ಬೈಕ್ ನಡುವೆ ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟಿರುವ ಘಟನೆ ಕಮಲಾಪುರ ತಾಲ್ಲೂಕಿನ ಮಹಾಗಾಂವ್‌ ಕ್ರಾಸ್ ಸಮೀಪದಲ್ಲಿ ಶನಿವಾರ ರಾತ್ರಿ ನಡೆದಿದೆ.

ಮೃತರನ್ನು ಕಮಲಾಪುರ ತಾಲ್ಲೂಕಿನ ಸಿರಗಾಪುರ ಗ್ರಾಮದ ಆಕಾಶ ಚಂದ್ರಕಾಂತ ಧನವಂತ (19), ಭೂಸಣಗಿ ಗ್ರಾಮದ ಸುಶೀಲ್‌ ಮಲ್ಲಿಕಾರ್ಜುನ (28) ಎಂದು ಗುರುತಿಸಲಾಗಿದೆ.

ಡಿಕ್ಕಿ ರಭಸಕ್ಕೆ ಬೈಕ್ ಗೆ ಬೆಂಕಿ ಹೊತ್ತಿಕೊಂಡಿದೆ. ಇಬ್ಬರಿಗೆ ಸುಟ್ಟ ಗಾಯಗಳಾಗಿದ್ದು, ಯುವಕ ಆಕಾಶ ಸ್ಥಳದಲ್ಲೆ ಮೃತಪಟ್ಟಿದ್ದು, ಸುಶೀಲ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಆಕಾಶ ಹಾಗೂ ಸುಶೀಲ್‌ ಇಬ್ಬರು ಬೈಕ್ ಮೇಲೆ ಸಿರಗಾಪುರದಿಂದ ಮಹಾಗಾಂವ್‌ ಕ್ರಾಸ್ ಕಡೆಗೆ ತೆರಳುತ್ತಿದ್ದರು. ಹೈದರಾಬಾದ್‌ ನಿಂದ ಕಲಬುರಗಿಗೆ ಕಾರು ತೆರಳುತ್ತಿತ್ತು. ಎರಡರ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News