ಜಾತಿ ನಿಂದನೆ ಆರೋಪ : ನಟಿ ನಯನಾ ವಿರುದ್ಧ ಪ್ರಕರಣ ದಾಖಲು
Update: 2025-11-19 22:56 IST
ಕಲಬುರಗಿ: ಜಾತಿ ನಿಂದನೆ ಮಾಡಿರುವ ಆರೋಪದಲ್ಲಿ "ಕಾಮಿಡಿ ಖಿಲಾಡಿಗಳು" ಖ್ಯಾತಿಯ ನಟಿ ನಯನಾ ಅವರ ವಿರುದ್ಧ ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಶಿವಲಿಂಗಪ್ಪ ಭಂಡಾರಿ ಅವರ ದೂರಿನ ಮೇರೆಗೆ ಸಬ್ ಅರ್ಬನ್ ಠಾಣೆಯ ಪೊಲೀಸರು, ನಟಿ ನಯನಾ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಹೊಲೆಯ ಜಾತಿಗೆ ಉದ್ದೇಶಪೂರ್ವಕವಾಗಿ ಅವಹೇಳನ ಮಾಡಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಂಜುನಾಥ್ ದೂರಿನಲ್ಲಿ ಆಗ್ರಹಿಸಿದ್ದರು.