×
Ad

ಕಲಬುರಗಿ | ಕೇಂದ್ರ ಕಾರಾಗೃಹದ ಕೈದಿಗಳಿಗೆ ರಾಜಾತಿಥ್ಯ ಆರೋಪ : ಡ್ರಗ್ಸ್ ಸೇವಿಸುತ್ತಿರುವ ವೀಡಿಯೊ ವೈರಲ್

Update: 2025-05-10 20:13 IST

ಕಲಬುರಗಿ ಕೇಂದ್ರ ಕಾರಾಗೃಹ

ಕಲಬುರಗಿ : ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನಲಾಗುತ್ತಿದ್ದು, ಡ್ರಗ್ಸ್ ಸೇವನೆಯ ವೀಡಿಯೊವೊಂದು ವೈರಲ್ ಆಗಿದೆ. ಅದರೊಂದಿಗೆ, ಮೊಬೈಲ್ ನೆಟ್ವರ್ಕ್ ಸಿಗದಂತೆ ಹಾಕಲಾದ ಜಾಮರ್‌ ಅನ್ನು ಕೈದಿಗಳು ಧ್ವಂಸ ಮಾಡಿರುವ ಘಟನೆಯೂ ನಡೆದಿದೆ ಎಂದು ತಿಳಿದು ಬಂದಿದೆ.

ವೈರಲ್ ಆಗಿರುವ ವೀಡಿಯೊದಲ್ಲಿ  ಕೈದಿ ಎನ್ನಲಾದ ವ್ಯಕ್ತಿಯು ಪರದೆ ಹಾಕಿರುವ ಕೊಠಡಿಯಲ್ಲಿ ಕುಳಿತು ಡ್ರಗ್ಸ್ ಸೇವನೆ ಮಾಡುತ್ತಿರುವುದು ಕಂಡು ಬಂದಿದೆ. ಕಲಬುರಗಿ ಕೇಂದ್ರ ಕಾರಾಗೃಹದ್ದು ಎನ್ನಲಾದ ಈ ವೀಡಿಯೊ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇನ್ನೊಂದು ಘಟನೆಯಲ್ಲಿ ಎ.29 ರಂದು ಕಲಬುರಗಿ ಕೇಂದ್ರ ಕಾರಾಗೃಹದ ಬ್ಯಾರಕ್ ಗಳಲ್ಲಿ ಮೊಬೈಲ್ ನೆಟ್ವರ್ಕ್ ಸಿಗದಂತೆ ಹಾಕಲಾದ ಜಾಮರ್‌ ಅನ್ನು ಕೈದಿಗಳು ಒಡೆದು ಧ್ವಂಸ ಮಾಡಿರುವ ಕೃತ್ಯ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 7 ಕೈದಿಗಳನ್ನು ಬೆಳಗಾವಿ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಜಾಮರ್ ಧ್ವಂಸ, ಕಾರಾಗೃಹದ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಫರತಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಓರ್ವ ಕೈದಿಯ ಪೋಷಕರು ಕಾರಾಗೃಹದಲ್ಲಿ ಪ್ರಭಾವಿ ಕೈದಿಗಳು ನಡೆಸಿರುವ ಕೃತ್ಯವನ್ನು ಅಮಾಯಕನ ಮೇಲೆ ಹಾಕಿ ಬೇರೆ ಕಾರಾಗೃಹಕ್ಕೆ ಸ್ಥಳಾಂತರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಸಿಸಿಟಿವಿ ದೃಶ್ಯವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ವರ್ಗಾವಣೆ ರದ್ದುಪಡಿಸಬೇಕೆಂದು ಕೈದಿ ಪೋಷಕರು ಕಾರಾಗೃಹದ ಡಿಜಿಪಿ, ಕಾರಾಗೃಹದ ಮುಖ್ಯ ಆಧೀಕ್ಷಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News