×
Ad

ಕಲಬುರಗಿ | ಮಾ.15 ರಂದು ಗ್ರಾಹಕರ ಕುಂದುಕೊರತೆ ಸಭೆ

Update: 2025-03-12 18:33 IST

ಕಲಬುರಗಿ : ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗೀಯ ಕಚೇರಿ-1ರ ವ್ಯಾಪ್ತಿಯ ಕೆಳಕಂಡ ಜೆಸ್ಕಾಂ ಉಪ-ವಿಭಾಗಗಳ ಕಚೇರಿಯಲ್ಲಿ ವ್ಯಾಪ್ತಿಯಲ್ಲಿ ಬರುವ ಗ್ರಾಹಕರ ಕುಂದು ಕೊರತೆಗಳ ಸಭೆಯನ್ನು ಇದೇ ಮಾ.15 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಕಲಬುರಗಿ ಗ್ರಾಮೀಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಗ್ರಾಮೀಣ ಜೆಸ್ಕಾಂ ಉಪವಿಭಾಗದ ಕಚೇರಿ, ಕಮಲಾಪೂರ ಉಪವಿಭಾಗಕ್ಕೆ ಸಂಬಂಧಿಸಿದಂತೆ ಕಮಲಾಪೂರ ಉಪವಿಭಾಗದ ಜೆಸ್ಕಾಂ ಉಪವಿಭಾಗ ಕಚೇರಿ, ಆಳಂದ ಉಪವಿಭಾಗಕ್ಕೆ ಸಂಬಂಧಿಸಿದಂತೆ ಆಳಂದ ಉಪವಿಭಾಗದ ಕಚೇರಿ, ಕಡಗಂಚಿ ಉಪವಿಭಾಗಕ್ಕೆ ಸಂಬಂಧಿಸಿದಂತೆ ಕಡಗಂಚಿ ಉಪವಿಭಾಗದ ಕಚೇರಿ, ಅಫಜಲಪುರ ಉಪವಿಭಾಗಕ್ಕೆ ಸಂಬಂಧಿಸಿದಂತೆ ಅಫಜಲಪುರ ಪಟ್ಟಣ ಶಾಖೆಯಲ್ಲಿ ಹಾಗೂ ಚೌಡಾಪುರ ಉಪವಿಭಾಗಕ್ಕೆ ಸಂಬಂಧಿಸಿದಂತೆ ಚೌಡಾಪುರ ರೇವೂರ (ಬಿ) ಶಾಖೆಯಲ್ಲಿ ಗ್ರಾಹಕರ ಕುಂದುಕೊರತೆ ಸಭೆ ಹಮ್ಮಿಕೊಳ್ಳಲಾಗಿದೆ.

ಈ ಸಭೆಯು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ವಿ) ಇವರ ಅಧ್ಯಕ್ಷತೆಯಲ್ಲಿ ಜರುಗಲಿದ್ದು, ಸಾರ್ವಜನಿಕರು ತಮ್ಮ ಸ್ಥಾವರಗಳ ವಿದ್ಯುತ್‌ ಸಂಬಂಧಿತ ಸಮಸ್ಯೆ ಹಾಗೂ ನಿವಾರಣೆಗಾಗಿ ಮೇಲ್ಕಂಡ ದಿನದಂದು ನಡೆಯುವ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News