ಕಲಬುರಗಿ | ಬೆಳೆ ಹಾನಿ : ಎಕರೆಗೆ 20 ಸಾವಿರ ರೂ. ಪರಿಹಾರ ನೀಡಲು ವೀರ ಕನ್ನಡಿಗರ ಸೇನೆ ಆಗ್ರಹ
ಕಲಬುರಗಿ: ಮಳೆಯಿಂದ ಬೆಳೆ ನಷ್ಟಕ್ಕೆ ತುತ್ತಾಗಿರುವ ರೈತರಿಗೆ ಶೀಘ್ರವೇ ಪ್ರತಿ ಎಕರೆಗೆ 20,000 ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ, ವೀರ ಕನ್ನಡಿಗರ ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿನೆ ನಡೆಸಿದರು.
ನಂತರ ಡಿ.ಸಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಅತಿವೃಷ್ಟಿಯಾಗಿ ರೈತರು ಬೆಳೆದಿರುವ ಬೆಳೆಗಳು ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ, ಏನು ಮಾಡಬೇಕೆಂದು ತಿಳಿಯದೆ ರೈತರು ಕಂಗಾಲಾಗಿದ್ದಾರೆ. ಕೂಡಲೇ ಸರ್ಕಾರ ರೈತರ ಪರವಾಗಿ ನಿಂತು ಪರಿಹಾರ ಘೋಷಣೆ ಮಾಡುವಲ್ಲಿ ನಿರತರಾಗಬೇಕೆಂದು ಸಂಘಟನೆಯ ಪದಾಧಿಕಾರಿಗಳು ಆಗ್ರಹಿಸಿದರು.
ನಮ್ಮ ಪ್ರದೇಶದಲ್ಲಿ ಬೆಳೆದಿರುವ ಹೆಸರು, ಉದ್ದು, ಸಜ್ಜೆ, ಹಾಗೂ ತೊಗರಿ ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಕೊಳೆತು ಹೋಗಿದ್ದು, ಅತಿಯಾದ ಮಳೆಯಿಂದ ಸಂಕಷ್ಟ ಅನುಭವಿಸಿದ ರೈತರಿಗೆ ಪರಿಹಾರ ಘೋಷಿಸಲಿ ಎಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ರಾಜ್ಯಾಧ್ಯಕ್ಷರಾದ ಅಮೃತ ಪಾಟೀಲ ಸಿರನೂರ ಹಾಗೂ ರವಿ ಒಂಟಿ, ವಿಠಲ ಕುಸಾಳೆ, ಉಮೇಶ ಸಿಂಗೆ, ಸೋಮಶೇಖರ ಗಡಿ ನಿಂಗಳಿ, ಗೋಪಾಲರಾವ, ಸಚಿನಕುಮಾರ, ಎಮ್.ಬಿ.ಪಾಟೀಲ,ಹಣಮಂತ ಇಂಜಿಹಳ್ಳಿ, ಅಶೋಕ ಬೀರನಳ್ಳಿ, ವಿಠಲ ಇಂಜಹಳ್ಳಿ, ಮಲ್ಲಿಕಾರ್ಜುನ ಮಠ, ಶಿವಾನಂದ ಚಿಕ್ಕಾಣಿ, ಪ್ರಶಾಂತ ಬಾಚನಳ್ಳಿ, ಅಣವೀರ ಬಿರಾದಾರ, ಸುಧೀರ ನವನಳ್ಳಿ, ಮಾಂತಗೌಡ ಹುಗಾರ, ಮಂಜುನಾಥ, ಲಕ್ಷ್ಮೀಕಾಂತ ಸಿಮನರಾಜ, ಹಣಮಂತ ಭಜಂತ್ರಿ, ಉದಯಕುಮಾರ, ಶ್ರವಣಕುಮಾರ, ಮಲ್ಲಿನಾಥ, ಸೋಮಾ, ಭಾಗಮ್ಮ ಚೌಧರಿ ಸೇರಿದಂತೆ ಮತ್ತಿತರರು ಇದ್ದರು