×
Ad

ಕಲಬುರಗಿ | ನಿತ್ಯದ ಬದುಕಿಗೆ ಸಾಂಸ್ಕೃತಿಕ ಅಭಿರುಚಿ ಮುಖ್ಯ : ಡಾ.ಸುಜಾತಾ ಜಂಗಮಶೆಟ್ಟಿ

Update: 2025-12-19 22:13 IST

ಕಲಬುರಗಿ: ನಿತ್ಯದ ಬದುಕಿಗೆ ಸಾಂಸ್ಕೃತಿಕ ಅಭಿರುಚಿ ಮುಖ್ಯ ಎಂದು ಕಲಬುರಗಿ ರಂಗಾಯಣದ ನಿರ್ದೇಶಕರಾದ ಡಾ.ಸುಜಾತಾ ಜಂಗಮಶೆಟ್ಟಿ ಹೇಳಿದರು.

ಇಲ್ಲಿನ ಕಲಬುರಗಿ ರಂಗಾಯಣದಲ್ಲಿ ಆಯೋಜಿಸಿದ್ದ ಕಲಬುರಗಿ ವಿಭಾಗದ ಕಲಾಪ್ರತಿಭೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈವರೆಗೂ ಜಗತ್ತಿನಲ್ಲಿ ಯಾರು ದೊಡ್ಡ ಸಾಧನೆ ಮಾಡಿದ್ದಾರೋ ಅವರೆಲ್ಲ ಔಪಚಾರಿಕ ಶಿಕ್ಷಣದಿಂದ ಹೊರಗೆ ಪಡೆದಿರುವ ಅನುಭವದಿಂದ ಸಾಧಿಸಿದ್ದಾರೆ. ಡಾ.ರಾಜ್‌ ಕುಮಾರ್‌, ರಜನಿಕಾಂತ್‌, ಡಾ. ಮಲ್ಲಿಕಾರ್ಜುನ ಮನ್ನೂರ, ಭೀಮಸೇನ ಜೋಶಿ, ಇವರೆಲ್ಲ ಹೆಚ್ಚು ಓದದಿದ್ದರೂ ಕಲೆಯ ಮುಖಾಂತರ ದೊಡ್ಡ ಸಾಧನೆ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆರಕ್ಷಕ ಉಪ ನಿರಿಕ್ಷಕರಾದ ಯಶೋಧಾ ಕಟಕೆಯವರು ಮಾತನಾಡಿ, ಮಕ್ಕಳಿಗೆ ಯಾವುದೇ ಹಿಂಜರಿಕೆ ಇರಬಾರದು. ಎಲ್ಲಾ ಸ್ಪರ್ದೆಗಳಲ್ಲಿ ಮಕ್ಕಳು ಬಹುಮಾನ ನಿರೀಕ್ಷೆ ಇಟ್ಟುಕೊಳ್ಳದೆ ಭಾಗವಹಿಸಬೇಕು. ವ್ಯಕ್ತಿ ಯಾವುದೇ ಹುದ್ದೆಯಲ್ಲಿರಲಿ ಆತನಿಗೆ ಸಂಗೀತ ಕಲೆಯ ಅಭಿರುಚಿ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಕಲಾತಪಸ್ವಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತರಾದ ಡಾ.ವಿಜಯ ಹಾಗರಗುಂಡಗಿ ಮಾತನಾಡಿ, ಕಲೆಗೆ ಸವಾಲು ಯಾವಾಗಲು ಇರುತ್ತದೆ. ಆ ಸವಾಲನ್ನು ಮೀರಿ ಕಲಾವಿದ ಬೆಳೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಬಾಲ ಪ್ರತಿಭೆ ಕಿಶೋರ ಪ್ರತಿಭೆ ಯುವ ಪ್ರತಿಭೆಯಲ್ಲಿ ಚಿತ್ರ ಕಲೆ, ಶಾಸ್ತ್ರೀಯ ನೃತ್ಯ ಸುಗಮ ಸಂಗೀತ, ಹಿಂದೂಸ್ಥಾನಿ ವಾದ್ಯ ಸಂಗೀತ ಸ್ಪರ್ಧೆಗಳು ನಡೆದವು.

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದೆ ಹನಿಫಾ ಶೇಖ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News