ಕಲಬುರಗಿ | ಸಮಾಜದಲ್ಲಿ ಪರೋಪಕಾರ ಸೇವೆ ಮುಖ್ಯ : ಅಭಿನವ ಸಿದ್ಧಲಿಂಗ ಶಿವಾಚಾರ್ಯ
ಕಲಬುರಗಿ: ಸಮಾಜದಲ್ಲಿ ನಾವು ಮಾಡುವ ಸೇವೆಗಳಲ್ಲಿ ಪರೋಪಕಾರ ಎಂಬ ಸೇವೆ ಮುಖ್ಯವಾಗಿದೆ ಎಂದು ಮುಗುಳನಾಗಾವಿ ಕಟ್ಟಿಮನಿ ಸಂಸ್ಥಾನ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಅವರು ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಮುತ್ಯಾನ ಬಬಲಾದ ಶ್ರೀ ಗುರುಪಾದಲಿಂಗ ಮಹಾಶಿವಯೋಗಿಗಳು ಹಾಗೂ ಭಾರತ ಗೌರವ ಪುರಸ್ಕಾರ ಪಡೆದ ಜಯಶ್ರೀ ಬಸವರಾಜ ಮತ್ತಿಮಡು ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಏರ್ಪಡಿಸಿದ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಜಯಶ್ರೀ ಬಸವರಾಜ ಮತ್ತಿಮಡು ಅವರು, ಈ ನೆಲದ ಸೊಸೆಯಾಗಿ, ಮಗಳಾಗಿ ಮಾಡಿದ ಸೇವೆಯೇ ಇಂದು ನನಗೆ ಇಂಥ ಗೌರವ ಸಿಕ್ಕಿದೆ. ಇದರಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಿದ್ದು, ಗ್ರಾಮೀಣ ಮತಕ್ಷೇತ್ರದ ಜನ ಸೇವೆ ಮಾಡಲು ಅವಕಾಸ ಸಿಕ್ಕಿದೆ. ಇಂದು ದೊರೆತ ಸನ್ಮಾನ ಜನರಿಗೆ ಅರ್ಪಿಸುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಯಾವ ವ್ಯಕ್ತಿ ತನಗಾಗಿ ಬದುಕದೇ ಜನರಿಗಾಗಿ ಬದುಕುತ್ತಾನೋ ಅವನು ಸಮಾಜದ ಬಹು ದೊಡ್ಡ ವ್ಯಕ್ತಿಯಾಗಿ ಬೆಳೆಯುತ್ತಾನೆ. ಮಠಾಧೀಶರು ಕೇವಲ ಮಠಕ್ಕೆ ಸೀಮಿತವಾಗದೇ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರಲ್ಲಿ ಮುತ್ತಿನ ಬಬಲಾದ ಶ್ರೀಗಳು ಹಾಗೂ ಮನೆಗೆ ಸೀಮಿತವಾಗದೇ ಜನರ ಸಮಸ್ಯೆಗೆ ಸ್ಪಂದಿಸಿ ಸೇವೆ ಮಾಡುವ ಜಯಶ್ರೀ ಮತ್ತಿಮಡು ನಮಗೆಲ್ಲ ಪ್ರೇರಣೆಯ ವ್ಯಕ್ತಿಗಳಾಗಿ ಕಾಣುತ್ತಾರೆ ಎಂದರು.
ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಿವಕುಮಾರ ಪಸಾರ, ಸಾಹಿತ್ಯ ಪ್ರೇರಕಿ ಲಕ್ಷ್ಮೀ ದತ್ತಾತ್ರೇಯ ಪಾಟೀಲ ರೇವೂರ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತಿಕರಣ ಸಂಘದ ರಾಜ್ಯ ನಿರ್ದೇಶಕಿ ರಾಜೇಶ್ವರಿ ಸಾಹು ಮಾತನಾಡಿದರು.
ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಎಚ್.ಧನ್ನಿ, ಸೈಯ್ಯದ್ ನಝಿರುದ್ದಿನ್ ಮುತ್ತವಲ್ಲಿ, ಕುಸನೂರ ಗ್ರಾಪಂ ಅಧ್ಯಕ್ಷ ಕುಪೇಂದ್ರ ಬರಗಾಲಿ, ಧರ್ಮರಾಜ ಜವಳಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಬಾಬುರಾವ ಪಾಟೀಲ, ಕಲ್ಯಾಣಕುಮಾರ ಶೀಲವಂತ, ರವಿಕುಮಾರ ಶಹಾಪೂರಕರ್, ಪ್ರಭುಲಿಂಗ ಮೂಲಗೆ, ದಿನೇಶ ಮದಕರಿ, ಜಗದೀಶ ಮರಪಳ್ಳಿ, ಶಿವಾನಂದ ಪೂಜಾರಿ, ಜಯಶ್ರೀ ಜಮಾದಾರ, ಜ್ಯೋತಿ ಕೋಟನೂರ, ಶಿವಾನಂದ ಮಠಪತಿ, ಶಿವಾನಂದ ಸುರವಸೆ, ಎಂ.ಎನ್ . ಸುಗಂಧಿ, ಡಾ. ರೆಹಮಾನ್ ಪಟೇಲ್, ಮಹಾನಂದಾ ಹುಲಿ, ಶಾರದಾ ಕಮದಗೂಳ, ವಿಶಾಲಾಕ್ಷಿ ಮಾಯಣ್ಣವರ್, ಮಲ್ಲಿಕಾರ್ಜುನ ಇಬ್ರಾಹಿಂಪುರ, ಶರಣು ಹಾಗರಗುಂಡಗಿ, ರೇವಯ್ಯಾ ಸ್ವಾಮಿ, ಜ್ಯೋತಿ ಮರಗೋಳ, ವಿನೋದ ಜೇನವೇರಿ, ಪದ್ಮಾವತಿ ನಾಯಕ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.