×
Ad

ಕಲಬುರಗಿ | ಕೇಂದ್ರ ಕಾರಾಗೃಹದ ಬಂಧಿಗಳಿಗೆ ಹಲ್ಲಿನ ತಪಾಸಣಾ ಶಿಬಿರ

Update: 2025-03-12 18:38 IST

ಕಲಬುರಗಿ : ಕಾರ್ಮಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರೆಸ್ಟ್(ರಿ) ಶಾಖೆ ಕಡಗಂಚಿ, ಕಲಬುರಗಿ ಅಲ್ ಬದರ್ ಡೆಂಟಲ್ ಆಸ್ಪತ್ರೆ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ದಂತ ದಿನಾಚರಣೆ ಅಂಗವಾಗಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಕಲಬುರಗಿ ಕೇಂದ್ರ ಕಾರಾಗೃಹದ ಬಂಧಿಗಳಿಗೆ ಉಚಿತವಾಗಿ ಹಲ್ಲಿನ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಕಡಗಂಚಿಯ ಕಾರ್ಮಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರೆಸ್ಟ್(ರಿ) ಶಾಖೆಯ ಮಿರಿಂಡಾ ಸೇಕ್ರೇಟರಿ ಫಾದರ್ ವಿಲಿಯಮ್ ಅವರು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಈ ಭಾಗದಲ್ಲಿ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಡಗಂಚಿಯ ಹತ್ತಿರದಲ್ಲಿ 3ನೇ ಶಾಖೆಯನ್ನು ಪ್ರಾರಂಭಿಸಲಾಗಿದ್ದು, ಮಾ. 7ರಂದು ದಂತ ದಿನಾಚರಣೆ ಪ್ರಯುಕ್ತ ಕಾರಾಗೃಹದ ಬಂದಿಗಳಿಗೆ ಹಲ್ಲಿನ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಅಲ್ಲದೇ ಮುಂದಿನ ದಿನಗಳಲ್ಲಿ ಉಳಿದ ಆರೋಗ್ಯ ಸಮಸ್ಯೆಗಳ ಶೀಘ್ರವಾಗಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ ಎಂದರು.

ಅತಿಥಿಗಳಾಗಿ ಕಲಬುರಗಿ ಅಲ್-ಬದರ್ ಡೆಂಟಲ್ ಆಸ್ಪತ್ರೆ (ಹೆಚ್.ಓ.ಡಿ) ಡಾ.ಸಂಗೀತಾ ಅವರು ಮಾತನಾಡಿ, ಹಲ್ಲು ನಮ್ಮ ದೇಹದ ಮುಖ್ಯ ಅಂಗ. ಹಾಗಾಗಿ ನಿಯಮಿತವಾಗಿ ನಾವು ನಮ್ಮ ಹಲ್ಲಿನ ರಕ್ಷಣೆಯನ್ನು ಮಾಡಬೇಕು. ಹಲ್ಲು ಇಲ್ಲದಿದ್ದರೆ ಮಾತನಾಡಲು, ಸೌಂದರ್ಯ, ಆಹಾರ ಅಗಿಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ದೇಹದ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಹಲ್ಲಿನ ಆರೋಗ್ಯ ಮುಖ್ಯ ಅದಕ್ಕಾಗಿ ಪ್ರತಿದಿನ 2 ಸಲ ಹಲ್ಲಿನ ಬ್ರೆಷ್ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಮುಖ್ಯ ಅಧೀಕ್ಷಕಿ ಡಾ.ಅನಿತಾ ಆರ್. ಅವರು ಮಾತನಾಡಿ, ತಾವು ಸ್ವಹ ದಂತ ವೈದ್ಯರು ಆಗಿರುವುದರಿಂದ ಬಂಧಿಗಳಲ್ಲಿ ಹಲ್ಲಿನ ಆರೋಗ್ಯದ ಬಗ್ಗೆ ಕುಲಂಕುಷವಾಗಿ ವಿವರಿಸಿ ಬಂಧಿ ನಿವಾಸಿಗಳು, ಹಲ್ಲನ್ನು ಸರಿಯಾದ ರೀತಿಯಲ್ಲಿ ಉಜ್ಜುವುದನ್ನ ಕರಗತ ಮಾಡಿಕೊಳ್ಳಲು ಹೇಳಿದರು. ಅಲ್ಲದೇ ಮುಂದೆ ನಿಂತು ಈ ಶಿಬಿರವನ್ನು ಯಶಸ್ವಿಗೊಳಿಸಿದರು.

ಈ ಶಿಬಿರದಲ್ಲಿ ಈ ಸಂಸ್ಥೆಯ ವೈದ್ಯಾಧಿಕಾರಿ ಡಾ.ಆನಂದ ಅಡಕಿ, ಸಹಾಯಕ ಅಧೀಕ್ಷಕ ಚನ್ನಪ್ಪ, ಜೈಲರ್ ಗಳಾದ ಸುನಂದ, ಸಾಗರ ಪಾಟೀಲ್, ಶ್ಯಾಮ ಬಿದ್ರಿ ಹಾಗೂ ಅಲ್ ಬ್ರದರ್ ದಂತ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಗಳು ಭಾಗವಹಿಸಿದರು. ಶಿಬಿರದಲ್ಲಿ ಒಟ್ಟು 89 ಜನರನ್ನು ತಪಾಸಣೆ ಮತ್ತು ಸಂಚಾರಿ ಬಸ್‍ನಲ್ಲಿ ಸ್ಕ್ರೀನಿಂಗ್ ತಪಾಸಣೆ ಮಾಡಲಾಯಿತು.

ಸ್ವಾಗತವನ್ನು ಸಂಸ್ಥೆಯ ಸಹಾಯಕ ಅಧೀಕ್ಷಕರಾದ ಬಿ. ಸುರೇಶ್ ಸ್ವಾಗತಿಸಿದರು. ಈ ಸಂಸ್ಥೆಯ ಶಿಕ್ಷಕರಾದ ನಾಗರಾಜ ಮುಲಗೆ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News