ಕಲಬುರಗಿ | ಮೀಲಾದುನ್ನಬಿ ಹಬ್ಬದಂದು ಡಿಜೆ ಬಳಸಬಾರದು: ಮೌಲಾನಾ ಮುಫ್ತಿ ಜಿಶಾನ ನಜ್ಮೀ
ಕಲಬುರಗಿ : ಸೆ. 5ರಂದು ಆಚರಿಸುವ (ಮೀಲಾದುನ್ನಬಿ) ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಹಬ್ಬದ ದಿನ ಯುವಕರು ಯಾವುದೇ ಕಾರಣಕ್ಕೂ ಡಿಜೆ ಬಳಬಾರದು, ನಮ್ಮಿಂದ ಬೇರೆಯವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಮರ್ಕಜ್ ಸುನ್ನಿ ದಾವತೇ ಎ ಇಸ್ಲಾಮಿ ಖತೀಬ್ ಇಮಾಮ್ , ಮೌಲಾನಾ ಮುಫ್ತಿ ಜಿಶಾನ ನಜ್ಮೀ ಹೇಳಿದರು.
ಸುನ್ನಿ ದಾವತೇ ಎ ಇಸ್ಲಾಮೀಯ ಗುಲ್ಬರ್ಗಾ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮತ್ತು ಬಡಾವಣೆಗಳಲ್ಲಿ ಜಾಥಾ ಮೂಲಕ ಹಬ್ಬದ ದಿನ ಯುವಕರು ಯಾವುದೇ ಕಾರಣಕ್ಕೂ ಡಿಜೆ ಬಳಬಾರದು, ಎಂದು ಅರಿವು ಮೂಡಿಸಲಾಯಿತು.
ಮೌಲಾನಾ ಮುಫ್ತಿ ಜಿಶಾನ ನಜ್ಮೀ ಅವರು ಮಾತನಾಡಿ, ಮೀಲಾದುನ್ನಬಿ ಹಬ್ಬವನ್ನು ಯಾರಿಗೂ ತೊಂದರೆ ಆಗದಂತೆ ಆಚರಿಸಲು ತೀರ್ಮಾನಿಸಲಾಗಿದೆ. ಶಾಂತಿ ನಮ್ಮ ಮೂಲ ಧರ್ಮವಾಗಿದೆ. ಈ ನಿಟ್ಟಿನಲ್ಲಿ ಮೀಲಾದುನ್ನಬಿ ದಿನದಂದು ಯಾರೇ ಡಿಜೆಗೆ ಅವಕಾಶ ನೀಡಿ ಅಂತ ಮನವಿ ಮಾಡಿದರೇ ಆ ಮನವಿಗೆ ಅವಕಾಶ ನೀಡಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೌಲಾನಾ ಶೈಬಾಜ್ ನಜ್ಮೀ, ಅರೀಫ್ ಅಕ್ತಾರ್, ಮುಹಮ್ಮದ್ ಇಮ್ರಾನ್ ಸೇರಿದಂತೆ ಇತರರು ಇದ್ದರು.