ಕಲಬುರಗಿ| ಗುಲ್ಬರ್ಗಾ ವಿವಿಯ ಪ್ರಭಾರಿ ಕುಲಪತಿಯಾಗಿ ಡಾ.ಅಬ್ದುಲ್ ರಬ್ ಉಸ್ತಾದ್ ಅಧಿಕಾರ ಸ್ವೀಕಾರ
Update: 2025-08-23 17:17 IST
ಕಲಬುರಗಿ : ಗುಲ್ಬರ್ಗಾ ವಿಶ್ವವಿದ್ಯಾಲಯದ ನೂತನ ಪ್ರಭಾರಿ ಕುಲಪತಿಯಾಗಿ ಉರ್ದು ವಿಭಾಗದ ಪ್ರಾಧ್ಯಾಪಕ ಮತ್ತು ಕಲಾ ನಿಕಾಯದ ಡೀನ್‌ರಾದ ಪ್ರೊ.ಅಬ್ದುಲ್ ರಬ್ ಉಸ್ತಾದ್ ಅವರು ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವ ಡಾ.ಎನ್.ಜಿ.ಕಣ್ಣೂರ, ಹಿರಿಯ ಪ್ರಾಧ್ಯಾಪಕ ಪ್ರೊ.ಎಚ್.ಟಿ.ಪೋತೆ, ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ.ಎಂ.ಎಸ್.ಪಾಸೋಡಿ, ಡಾ.ರಮೇಶ್ ರಾಠೋಡ, ಡಾ.ರಮೇಶ್ ಲಂಡನಕರ್, ಬಿ.ಎಂ.ರುದ್ರವಾಡಿ, ಡಾ.ರಾಜಕುಮಾರ ದಣ್ಣೂರ ಮುಂತಾದವರು ನೂತನ ಕುಲಪತಿಗಳಿಗೆ ಅಭಿನಂದನೆ ಸಲ್ಲಿಸಿದರು.