×
Ad

ಕಲಬುರಗಿ | ಸಿಯುಕೆಯಲ್ಲಿ ಡಾ.ಬಾಬು ಜಗಜೀವನ ರಾಮ್‌ ಜನ್ಮದಿನಾಚರಣೆ

Update: 2025-04-05 22:40 IST

ಕಲಬುರಗಿ : “ಡಾ.ಬಾಬು ಜಗಜೀವನ ರಾಮ್‌ ಅವರು ಯುವ ಮನಸ್ಸುಗಳಿಗೆ ಸ್ಫೂರ್ತಿ ಮತ್ತು ಮಾದರಿಯಾಗಿದ್ದಾರೆ” ಎಂದು ಸಿಯುಕೆಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.

ಆಳಂದ ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ಡಾ.ಬಾಬು ಜಗಜೀವನ್ ರಾಮ್‌ ಅವರ 118ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.

“ಡಾ.ಬಾಬು ಜಗಜೀವನ ರಾಮ್‌ ಅವರು ದೇಶವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರ ಕೃಷಿ ಕ್ಷೇತ್ರದ ಕೊಡುಗೆಯ ಸಹಾಯದಿಂದ ಭಾರತವು ಸ್ಥಿರವಾದ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿದೆ. ಡಾ.ಬಾಬು ಜಗಜೀವನ ರಾಮ್‌ ಅವರ ‘ಹಸಿರು ಕ್ರಾಂತಿಯ’ ದೃಷ್ಟಿಕೋನದಿಂದಾಗಿ ಇದು ಸಾಧ್ಯವಾಯಿತು” ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ದೇವಿದಾಸ ಜಿ.ಬಿ. ಅವರು ಮಾತನಾಡಿದರು.

ಪ್ರೊ.ಬಿಮಾರಾವ್ ಭೋಸ್ಲೆ, ಡಾ.ಬಸವರಾಜ ಕುಬಕಡ್ಡಿ, ಡಾ.ಅಖಿಲೇಶ್, ಎಲ್ಲಾ ಡೀನರು, ಮುಖ್ಯಸ್ಥರು, ಸಂಶೋಧನಾ ವಿದ್ವಾಂಸರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರೊ.ದೇವರಾಜಪ್ಪ ಎಲ್ಲರನ್ನು ಸ್ವಾಗತಿಸಿದರು. ಡಾ.ಭಾವನಾ ನಿರೂಪಿಸಿದರು. ಸಂಯೋಜಕ ಡಾ.ಸಂಜೀವರಾಯಪ್ಪ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News