×
Ad

ಕಲಬುರಗಿ | ಜಿಲ್ಲೆಯಲ್ಲಿ 7 ಜೋಳ, 8 ಭತ್ತದ ಖರೀದಿ ಕೇಂದ್ರಗಳ ಸ್ಥಾಪನೆ : ಬಿ.ಫೌಝಿಯಾ ತರನ್ನುಮ್

Update: 2025-04-03 18:26 IST

 ಬಿ.ಫೌಝಿಯಾ ತರನ್ನುಮ್

ಕಲಬುರಗಿ : 2024-25ನೇ ಸಾಲಿನ ಹಿಂಗಾರು (ರಬಿ) ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಜೋಳ ಮತ್ತು ಭತ್ತ ಖರೀದಿಸಲು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ತೀರ್ಮಾನದಂತೆ ಜಿಲ್ಲೆಯಲ್ಲಿ ಜೋಳ ಮತ್ತು ಭತ್ತ ಖರೀದಿಯ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವತಿಯಿಂದ ಜಿಲ್ಲೆಯಲ್ಲಿ ಒಟ್ಟು 7 ಜೋಳ ಖರೀದಿ ಕೇಂದ್ರ ಹಾಗೂ 8 ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ತಿಳಿಸಿದ್ದಾರೆ.

ಜಿಲ್ಲೆಯ ರೈತರಿಂದ ಜೋಳ ಮತ್ತು ಭತ್ತ ನೊಂದಣಿ ಮತ್ತು ಖರೀದಿಗೆ ಸಂಗ್ರಹಣಾ ಏಜೆನ್ಸಿಯನ್ನಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವನ್ನು ಸರ್ಕಾರವು ನೇಮಿಸಿದ್ದು, ಬೆಂಬಲ ಬೆಲೆ ಯೋಜನೆಯಡಿ ಬಿಳಿಜೋಳ-ಹೈಬ್ರಿಡ್ ಪ್ರತಿ ಕ್ವಿಂಟಾಲ್‍ಗೆ ದರ 3,371 ರೂ. ಹಾಗೂ ಬಿಳಿಜೋಳ ಪ್ರತಿ ಕ್ವಿಂಟಾಲ್‍ಗೆ ದರ 3,421 ರೂ. ಇರುತ್ತದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೆರೆಯಲಾದ ಜೋಳ ಖರೀದಿ ಕೇಂದ್ರಗಳ ವಿವರ, ಖರೀದಿ ಕೇಂದ್ರದ ಅಧಿಕಾರಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆಗಳ ವಿವರ ಕೆಳಕಂಡಂತೆ ಇರುತ್ತದೆ.

ಅಫಜಲಪೂರ : ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಫಜಲಪೂರ (ಖರೀದಿ ಕೇಂದ್ರದ ಅಧಿಕಾರಿ-ಕು. ದೀಪಾ ಚಿಕಮೆಟ್ಟಿ-ಮೊಬೈಲ್ ಸಂಖ್ಯೆ 8861258207).

ಆಳಂದ : ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಆಳಂದ (ಖರೀದಿ ಕೇಂದ್ರದ ಅಧಿಕಾರಿ-ರಾಜಕುಮಾರ-8880659915).

ಚಿಂಚೋಳಿ : ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಚಿಂಚೋಳಿ (ಖರೀದಿ ಕೇಂದ್ರದ ಅಧಿಕಾರಿ-ಚಂದ್ರಕಾಂತ ಬೆಣ್ಣಸಿರೂರು-9448133987).

ಚಿತ್ತಾಪೂರ : ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಚಿತ್ತಾಪೂರ (ಖರೀದಿ ಕೇಂದ್ರದ ಅಧಿಕಾರಿ-ಪ್ರಕಾಶ ಪವಾರ-9845359642).

ಕಲಬುರಗಿ : ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಕಲಬುರಗಿ (ಖರೀದಿ ಕೇಂದ್ರದ ಅಧಿಕಾರಿ-ಪ್ರಕಾಶ ಪವಾರ-9845359642).

ಜೇವರ್ಗಿ : ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಜೇವರ್ಗಿ (ಖರೀದಿ ಕೇಂದ್ರದ ಅಧಿಕಾರಿ-ರಾಜಕುಮಾರ-8880659915).

ಸೇಡಂ : ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಸೇಡಂ (ಖರೀದಿ ಕೇಂದ್ರದ ಅಧಿಕಾರಿ- ಚಂದ್ರಕಾಂತ ಬೆಣ್ಣಸಿರೂರು-9448133987).

ಬೆಂಬಲ ಬೆಲೆ ಯೋಜನೆಯಡಿ ಭತ್ತ-ಸಾಮಾನ್ಯ ಪ್ರತಿ ಕ್ವಿಂಟಲ್‍ಗೆ ದರ 2,300 ರೂ. ಹಾಗೂ ಭತ್ತ-ಗ್ರೇಡ್-ಎ ಪ್ರತಿ ಕ್ವಿಂಟಲ್‍ಗೆ ದರ 2,320 ರೂ. ಇರುತ್ತದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೆರೆಯಲಾದ ಭತ್ತ ಖರೀದಿ ಕೇಂದ್ರಗಳ ವಿವರ ಕೆಳಕಂಡಂತೆ ಇರುತ್ತದೆ.

ಚಿತ್ತಾಪೂರ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸನ್ನತಿ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಲ್ಲೂರ.

ಸೇಡಂ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮುಧೋಳ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಾಡೇಪಲ್ಲಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮದನಾ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೊಲಕುಂದಾ.

ಜೇವರ್ಗಿ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬಳಬಟ್ಟಿ

ಯಡ್ರಾಮಿ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಳ್ಳಿ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರು ತಾವು ಬೆಳೆದ ಭತ್ತ ಮತ್ತು ಜೋಳವನ್ನು ಮಾರಾಟ ಮಾಡಲು ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ಕೃಷಿ ಇಲಾಖೆಯಿಂದ ನೀಡಲಾಗುವ ಫ್ರೂಟ್ಸ್‌ ಐಡಿ ಮತ್ತು ಆಧಾರ ಕಾರ್ಡಿನ ಪ್ರತಿಯನ್ನು ತೆಗೆದುಕೊಂಡು ಹೋಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಮಾ.29 ರಿಂದ ಜೋಳ ಖರೀದಿಗೆ ಸಂಬಂಧಿಸಿದಂತೆ ರೈತರ ನೊಂದಣಿ ಕಾರ್ಯ ಪ್ರಾರಂಭಿಸಲಾಗಿದೆ.ಎ.1 ರಿಂದ ದಿನಾಂಕ ಮೇ 5 ರವರೆಗೆ ನೊಂದಾಯಿತ ರೈತರಿಂದ ಜೋಳ ಖರೀದಿಸಲಾಗುತ್ತದೆ. ಅದೇ ರೀತಿಯಾಗಿ ಮಾ.29ರಿಂದ ಎ.25 ರವರೆಗೆ ಭತ್ತ ಖರೀದಿಗೆ ಸಂಬಂಧಿಸಿದಂತೆ ರೈತರ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಎ.1 ರಿಂದ ಮೇ 31-05-2025 ರವರೆಗೆ ನೊಂದಾಯಿತ ರೈತರಿಂದ ಭತ್ತವನ್ನು ಖರೀದಿಸಲಾಗುತ್ತದೆ.

ಕಲಬುರಗಿ ಜಿಲ್ಲೆಯ ರೈತರು ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಕಚೇರಿಯ ಜಿಲ್ಲಾ ವ್ಯವಸ್ಥಾಪಕರನ್ನು ಹಾಗೂ ಕಚೇರಿಯ ದೂರವಾಣಿ ಸಂಖ್ಯೆ 08472-254984 ಹಾಗೂ ಮೊಬೈಲ್ ಸಂಖ್ಯೆ 9448496023 ಕರೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News