Kalaburagi | ಆಟೋ ಚಾಲಕರ ಸಂಘಟನೆಯ ನೂತನ ಘಟಕ ರಚನೆ
ಕಲಬುರಗಿ: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು) ಗುಲ್ಬರ್ಗಾ ಜಿಲ್ಲಾ ಘಟಕದ ವತಿಯಿಂದ ನಗರದೊಳಗೆ ಭಾನುವಾರ ನಡೆದ ಸಂಘಟನಾ ಸಭೆಯಲ್ಲಿ ಆಟೋ ಯೂನಿಯನ್ ಟಿಪ್ಪು ಸುಲ್ತಾನ್ ಘಟಕದ ನೂತನ ಕೌನ್ಸಿಲ್ ರಚಿಸಲಾಯಿತು.
ಸಭೆಯಲ್ಲಿ ಚುನಾವಣೆಯ ಮೂಲಕ ಅಬ್ದುಲ್ ನಬಿ ಅವರನ್ನು ಅಧ್ಯಕ್ಷರಾಗಿ, ಸೈಯದ್ ಮದಾರ್ ಅವರನ್ನು ಉಪಾಧ್ಯಕ್ಷರಾಗಿ, ಮೊಹಮ್ಮದ್ ಅಲಿ ಮುರ್ತಜಾ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಸೈಯದ್ ಸದ್ರುದ್ದೀನ್ ಅವರನ್ನು ಜಂಟಿ ಕಾರ್ಯದರ್ಶಿಯಾಗಿ, ಅನ್ವರ್ ಅವರನ್ನು ಖಜಾಂಚಿಯಾಗಿ ಹಾಗೂ ಇಬ್ರಾಹಿಂ ಅವರನ್ನು ಮಾಧ್ಯಮ ಉಸ್ತುವಾರಿಯಾಗಿ ಆಯ್ಕೆ ಮಾಡಲಾಯಿತು.
ಇದರ ಜೊತೆಗೆ 25 ಸದಸ್ಯರನ್ನು ಒಳಗೊಂಡ ನೂತನ ಕಾರ್ಯಕಾರಿ ಸಮಿತಿಯನ್ನೂ ಸಭೆಯಲ್ಲಿ ರಚಿಸಲಾಯಿತು.
ಜಿಲ್ಲಾ ಅಧ್ಯಕ್ಷ ಸೈಯದ್ ಜಾಕಿರ್ ಹಾಗೂ ರಾಜ್ಯ ಕಾರ್ಯದರ್ಶಿ ಮತ್ತು ಗುಲ್ಬರ್ಗಾ ಉಸ್ತುವಾರಿ ಸೈಯದ್ ಅಲ್ತಾಫ್ ಅವರ ಮೇಲ್ವಿಚಾರಣೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಆಟೋ ಚಾಲಕರ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಸದಸ್ಯರ ಸಮಸ್ಯೆಗಳು, ಹಕ್ಕುಗಳ ರಕ್ಷಣೆ ಹಾಗೂ ಸಂಘಟನೆಯ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಎಸ್‌ಡಿಟಿಯು ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಆಟೋ ಚಾಲಕರ ಪ್ರತಿನಿಧಿಗಳು ಉಪಸ್ಥಿತರಿದ್ದರು.