ಚಿತ್ತಾಪುರ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹೋರಾಟ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಲಕ್ಷ್ಮೀಕಾಂತ್ ತಾಂಡೂರಕರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಪಟ್ಟಣದ ನಾಗಾವಿಯ ಅರವತ್ತು ಕಂಬದ ದೇವಸ್ಥಾನದ ಆವರಣದಲ್ಲಿ ನಡೆದ ಸ್ಲಂ ಬೋರ್ಡ್ ನಿವಾಸಿಗಳ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಗೌರವಾಧ್ಯಕ್ಷರಾಗಿ ಅಂಬದಾಸ್ ಚವ್ಹಾಣ, ಅಧ್ಯಕ್ಷರಾಗಿ ಲಕ್ಷ್ಮೀಕಾಂತ್ ತಾಂಡೂರಕರ್, ಉಪಾಧ್ಯಕ್ಷರಾಗಿ ಕೃಷ್ಣ ಭೋವಿ ಹಾಗೂ ಜಗನ್ ಕಾಶಿ, ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ್ ರೆಡ್ಡಿ, ಖಜಾಂಚಿಯಾಗಿ ಚಂದ್ರಶೇಖರ್ ಕಡೇಸೂರ್, ಉಪ ಖಜಾಂಚಿಯಾಗಿ ಶಂಕರ್ ಸೋಮ್ಲಾ ರಾಠೋಡ, ಸಹ ಕಾರ್ಯದರ್ಶಿಯಾಗಿ ಕುಮಾರ್ ಚವ್ಹಾಣ, ಪ್ರಧಾನ ಕಾರ್ಯದರ್ಶಿಯಾಗಿ ಶಿವರುದ್ರ ಕಟ್ಟಿಮನಿ ಆಯ್ಕೆಯಾಗಿದ್ದಾರೆ.

ಗೌರವ ಸದಸ್ಯರಾಗಿ ಅಲ್ಲಾಭಕಾಶ್ ಮುಲ್ಲಾವಾಲೆ, ಶಿವಾಜಿ ಸಿಂಧೆ, ಮನೋಹರ ಚವ್ಹಾಣ, ಸಂತೋಷ್ ಎಸ್. ಭಂಗಿ, ನಾಗು ಹೋಳಿಕಟ್ಟಿ, ಸಂತೋಷ್ ಜಾಧವ, ರಾಜು ಗುತ್ತೇದಾರ, ರವಿ ಭೀಮನಹಳ್ಳಿಕರ್, ಹರಿಲಾಲ್ ಜಾಧವ, ಸುನಿಲ್ ರಾಠೋಡ, ನಾಗೇಶ್ ತುಕಾರಾಮ್ ಚವ್ಹಾಣ, ಸುನಿತಾ ಶಿವಾಜಿ ರಾಠೋಡ, ಇಂದಿರಾ ಭಜಂತ್ರಿ, ಮಾಲನ್ ಬಿ. ಹಾಗೂ ಕಾಶಮ್ಮ ಶರಣಪ್ಪ ಭಜಂತ್ರಿ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷ ಲಕ್ಷ್ಮೀಕಾಂತ್ ತಾಂಡೂರಕರ್ ಮಾತನಾಡಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ದಿಗ್ಗಾಂವ ಕ್ರಾಸ್‌ನ ಕೆಸಿಎಲ್ ಫ್ಯಾಕ್ಟರಿ ಸಮೀಪ ಹಾಗೂ ಸಾತನೂರ ರಸ್ತೆಯಲ್ಲಿ ನಿರ್ಮಾಣವಾಗಿರುವ ಜಿ+1 ಮಾದರಿಯ ಸಾವಿರ ಮನೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಹೋರಾಟ ಸಮಿತಿ ರಚಿಸಲಾಗಿದೆ. ಹೀಗಾಗಿ ಎಲ್ಲರೂ ಒಗ್ಗೂಡಿ ಸಮಿತಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor