×
Ad

ಕಲಬುರಗಿ | ಮೇ 1ರಂದು ಆಳಂದದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ : ಪೂಜಾ ರಮೇಶ

Update: 2025-04-28 17:01 IST

ಕಲಬುರಗಿ : ಆಳಂದ ಪಟ್ಟಣದ ಬಸವಗಂಗಾ ಮೆಡಿಕಲ್ ಬಸ್ ನಿಲ್ದಾಣ ಬಳಿಯ ಎಪಿಎಂಸಿ ಕಾಂಪ್ಲೆಕ್ಸ್ ಬಳಿ ಮೇ 1ರಂದು ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಉರಮಗಾದ ಡಾ.ಯೇಳಾಪೂರ ಸಂಗಮೇಶ್ವರ ಸ್ಪೇಷಾಲಿಟಿ ಆಸ್ಪತ್ರೆ ಮತ್ತು ಆಳಂದ ರಮೇಶ ಲೋಹಾರ  ಬಸವಗಂಗಾ ಮೆಡಿಕಲ್ ಆಶ್ರಯದ ಸಂಗಮೇಶ್ವರ ಕ್ಲಿನಿಕ್ ಪ್ರಾರಂಭೋತ್ಸವ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ, ಸಾರ್ವಜನಿಕರು ಶಿಬಿರದ ಲಾಭವನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಶಿಬಿರದಲ್ಲಿ ನುರಿತ ತಜ್ಞ ವೈದ್ಯರಾದ ಡಾ.ಸುಭಾಷ ಯಾಳಾಪೂರ, ಡಾ.ನೀಲೇಶ ಸುಭಾಷ ಯಾಳಾಪೂರ, ಡಾ.ನೇಹಾ, ಡಾ.ತ್ರಿವೇದಿ ರಾಹುಲ ಪ್ರಸಾದ ತಪಾಸಣೆ ನಡೆಸಲಿದ್ದಾರೆ.

ಸಕ್ಕರೆ ಕಾಯಿಲೆ, ಬಿಪಿ, ದಮ್ಮಾ ಅಸ್ತಮಾ, ಶ್ವಾಸಕೋಶ ಸಮಸ್ಯೆ, ಕ್ಷಯರೋಗ, ಹೃದಯ ರೋಗ, ಸ್ತ್ರೀರೋಗ ಸಮಸ್ಯೆ, ಬಂಜೇತನ ಸಮಸ್ಯೆ, ಮುಟ್ಟ ದೋಷ, ಚರ್ಮರೋಗ ಸಮಸ್ಯೆ, ಲೈಂಗಿಕ ಸಮಸ್ಯೆ, ಲಕ್ವಾ, ಕಿಡ್ನಿ, ಥೈರಾಡ ಸಮಸ್ಯೆ, ಕುಷ್ಠರೋಗ ಸಮಸ್ಯೆ ಮತ್ತು ರಕ್ತ ಹೀನತೆಯ ತಪಾಸಣೆ ನಡೆಸಲಿದ್ದಾರೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News