×
Ad

ಕಲಬುರಗಿ| ಅವ್ಯವಸ್ಥೆಯ ಆಗರವಾದ ಗೋಳಾ(ಕೆ) ಸರಕಾರಿ ಶಾಲೆ : ಗ್ರಾಮಸ್ಥರ ಆಕ್ರೋಶ

Update: 2025-11-10 21:55 IST

ಕಲಬುರಗಿ: ಗೋಳಾ(ಕೆ) ಸರಕಾರಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯದಲ್ಲಿ ನೀರಿನ ವ್ಯವಸ್ಥೆಯಿಲ್ಲದೆ ಮಕ್ಕಳು ತೊಂದರೆಗೀಡಾಗುತ್ತಿದ್ದಾರೆ. ಮುಖ್ಯಗುರುಗಳು ಈ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಶಹಾಬಾದ ತಾಲೂಕಿನ ಗೋಳಾ(ಕೆ) ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಕುಡಿಯುವ ನೀರಿನ ಸಿಮೆಂಟ್ ಟಾಂಕಿಯಲ್ಲಿ ಮಣ್ಣು, ಕಲ್ಲುಗಳು ಬಿದ್ದಿವೆ. ಅದೇ ನೀರನ್ನು ವಿದ್ಯಾರ್ಥಿಗಳು ಕುಡಿಯುತ್ತಿದ್ದಾರೆ. ಒಂದು ವೇಳೆ ಏನಾದರೂ ಅನಾಹುತವಾದರೆ ಹೇಗೆ? ಎಂಬ ಆತಂಕ ಎದುರಾಗಿದೆ. ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕರಾದ ಹೇಮಾಬಾಯಿ ರಾಠೋಡ ಅವರಿಗೆ ತಿಳಿಸಿದರೂ ಅವರು ಆ ಬಗ್ಗೆ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಕ್ಕಳಿಗೆ ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಮ್ಮೂರಿನ ಸರಕಾರಿ ಶಾಲೆಯ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಕುಡಿಯುವ ನೀರಿನ ಟ್ಯಾಂಕಿಯಲ್ಲಿ ಮಣ್ಣು, ಕಲ್ಲುಗಳು ಬಿದ್ದರೂ, ಸ್ವಚ್ಛಗೊಳಿಸುವ ಬಗ್ಗೆ ಮುಖ್ಯ ಶಿಕ್ಷಕರು ಗಮನಹರಿಸುತ್ತಿಲ್ಲ.  ಆ ನೀರನ್ನು ಅವರು ಹಾಗೂ ಸಹಶಿಕ್ಷಕರು ಕುಡಿಯೋದಿಲ್ಲ. ಅಂತಹ ನೀರನ್ನು ಮಕ್ಕಳು ಕುಡಿಯುತ್ತಿದ್ದಾರೆ. ಆದ್ದರಿಂದ ಕೂಡಲೇ ಶಿಕ್ಷಣಾಧಿಕಾರಿಗಳು ಮುಖ್ಯಗುರುಗಳನ್ನು ವರ್ಗಾವಣೆಗೊಳಿಸಿ ಮಕ್ಕಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು ಎಂದು ಕರವೇ ತಾಲೂಕಾಧ್ಯಕ್ಷ ಯಲ್ಲಾಲಿಂಗ ಹೈಯ್ಯಾಳಕರ್ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News