×
Ad

ಕಲಬುರಗಿ ಐಟಿಎಫ್‌ ಮಹಿಳಾ ಟೆನಿಸ್ ಟೂರ್ನಿ : ಅಂಕಿತಾ ರೈನಾ - ಅಶ್ವಿನಿ ಅಡ್ಕರ್ ಜೋಡಿ ಡಬಲ್ಸ್ ಚಾಂಪಿಯನ್

ಕನ್ನಡತಿ ಸೋಹಾ - ಆಕಾಂಕ್ಷಾ ಜೋಡಿಗೆ ಆಘಾತ

Update: 2026-03-07 17:01 IST

ಕಲಬುರಗಿ: ಭಾರತೀಯ ಆಟಗಾರ್ತಿಯರಾದ ಅಂಕಿತಾ ರೈನಾ ಹಾಗೂ ಅಶ್ವಿನಿ ಅಡ್ಕರ್ ಜೋಡಿಯು ಕನ್ನಡತಿ ಸೋಹಾ ಸಾದಿಕ್ ಹಾಗೂ ಆಕಾಂಕ್ಷಾ ನಿಟ್ಟೂರ ಜೋಡಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಶನಿವಾರ ಇಲ್ಲಿನ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ ಜರುಗಿದ್ದ ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅಂಕಿತಾ ರೈನಾ ಹಾಗೂ ಅಶ್ವಿನಿ ಅಡ್ಕರ್ ಜೋಡಿಯು ಸೋಹಾ ಸಾದಿಕ್ - ಆಕಾಂಕ್ಷಾ ನಿಟ್ಟೂರ ಜೋಡಿಯನ್ನು 6-2, 6- 2 ನೇರ ಸೆಟ್ ಗಳ ಮೂಲಕ ಗೆಲುವು ಸಾಧಿಸಿದರು.

ಡಬಲ್ಸ್ ಚಾಂಪಿಯನ್ನರೇ ಸಿಂಗಲ್ಸ್ ನಲ್ಲಿ ಫೈನಲ್ ಕಾದಾಟ :

ಶನಿವಾರ ಡಬಲ್ಸ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಅಂಕಿತಾ ರೈನಾ ಹಾಗೂ ಅಶ್ವಿನಿ ಅಡ್ಕರ್ ಜೋಡಿಯೇ ನಾಳೆ (ರವಿವಾರ) ಬೆಳಗ್ಗೆ ನಡೆಯಲಿರುವ ಸಿಂಗಲ್ಸ್ ಫೈನಲ್ ನಲ್ಲಿ ಪರಸ್ಪರ ಎದುರಾಳುಗಳಾಗಿ ಪ್ರಶಸ್ತಿಗೆ ಕಾದಾಟ ನಡೆಸಲಿದ್ದಾರೆ.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News