ಕಲಬುರಗಿ| ಕನ್ನಡ ವಿಶ್ವದಲ್ಲೇ ಶ್ರೀಮಂತ ಭಾಷೆ : ಡಾ. ಶಿವಶರಣಪ್ಪ ಮೊತಕಪಳ್ಳಿ
ಕಲಬುರಗಿ: ಕನ್ನಡ ಭಾಷೆ ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಹಾಗೂ ಸಮೃದ್ಧಿಯಾದ ಭಾಷೆ ಎಂದು ಕಾಳಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಶಿವಶರಣಪ್ಪ ಮೊತಕಪಳ್ಳಿ ಹೇಳಿದರು.
ಕಾಳಗಿ ಪಟ್ಟಣದ ಶ್ರೀ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಯುವ ಕರ್ನಾಟಕ ರಕ್ಷಣಾ ಸೇನೆ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಡಾ. ಶಿವಶರಣಪ್ಪ ಮೊತಕಪಳ್ಳಿ, ಸುಮಾರು ಎರಡು ಸಾವಿರ ವರ್ಷಗಳಷ್ಟು ಸಾಂಸ್ಕೃತಿಕ ಇತಿಹಾಸ ಹೊಂದಿರುವ ಮಾತೃಭಾಷೆ ಕನ್ನಡ ಭಾಷೆಯು ಶ್ರೀಮಂತ ಭಾಷೆಯಾಗಿದ್ದು, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಕನ್ನಡ ಶ್ರೀಮಂತ ಭಾಷೆಯಾಗಿದ್ದು, ಕನ್ನಡಿಗರು ಹೃದಯ ಶ್ರೀಮಂತಿಕೆ ಬೆಳೆಸಿಕೊಂಡಿರುವುದರಿಂದ ಎಲ್ಲಾ ಭಾಷಿಕರಿಗೂ ನೆಲೆಕೊಟ್ಟಿದ್ದಾರೆ. ಕನ್ನಡ ರಾಜ್ಯೋತ್ಸವ ಕನ್ನಡದ ಹಬ್ಬ, ಕನ್ನಡಿಗರ ಹಬ್ಬವಾಗಿದೆ. ಕನ್ನಡ ನಾಡು ನುಡಿಗೆ ತನ್ನದೇ ಆದ ಇತಿಹಾಸ, ಹಿರಿಮೆ, ಗರಿಮೆ ಇದೆ. ಕನ್ನಡ ನಾಡಿನಲ್ಲಿ ಜನಿಸಿರುವುದೇ ಒಂದು ಪುಣ್ಯ. ಈ ನಾಡು, ಭಾಷೆಯನ್ನು ಪ್ರತಿಯೊಬ್ಬರೂ ಬೆಳೆಸಬೇಕು. ನಾವೆಲ್ಲರೂ ಕನ್ನಡ ಬಳಕೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದು ಹೇಳಿದರು.
ತಾ.ಪಂ ಇಒ ಡಾ. ಬಸಲಿಂಗಪ್ಪ ಡಿಗ್ಗಿ, ಯುವ ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ದತ್ತು ಗುತ್ತೇದಾರ, ಕಾಳಗಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಅನೀಲಕುಮಾರ್ ಗುತ್ತೇದಾರ, ಕಸಾಪ ಅಧ್ಯಕ್ಷ ಸಂತೋಷ ಕುಡ್ಡಳ್ಳಿ ಮಾತನಾಡಿದರು.
ಕಾಳಗಿ ಪಟ್ಟಣದ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಿಂದ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನದವರೆಗೆ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆಯು ಅದ್ಧೂರಿಯಾಗಿ ನಡೆಯಿತು. ಕಾಳಗಿ ಗ್ರೇಡ್- 1 ತಹಶೀಲ್ದಾರ್ ಪೃಥ್ವಿರಾಜ್ ಪಾಟೀಲ್ ಮೆರವಣಿಗೆಗೆ ಚಾಲನೆ ನೀಡಿದರು.
ಕಾಳಗಿ ಹಿರೇಮಠದ ಪೂಜ್ಯ ನೀಲಕಂಠ ಮರಿದೇವರು ಸಾನಿಧ್ಯ ವಹಿಸಿದ್ದರು. ಈ ವೇಳೆ ಕಾಂಗ್ರೆಸ್ ಯುವ ನಾಯಕರಾದ ನೀಲಕಂಠ ಗುತ್ತೇದಾರ್, ಚಿಂತನ ರಾಠೋಡ್, ಉಪ ತಹಶೀಲ್ದಾರ್ ಮಾಣಿಕ ಘತ್ತರಗಿ, ಪಿಡಬ್ಲ್ಯೂಡಿ ಎಇಇ ಪ್ರಜ್ಞಾಶೀಲಾ ಗಂಜಗೇರಿ, ಮಂಗಲಗಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ದೀಪಕ ರಾಠೋಡ್, ಕೃಷಿ ಅಧಿಕಾರಿ ರಾಹುಲ್ ಚವ್ಹಾಣ, ಜೆಸ್ಕಾಂ ಅಧಿಕಾರಿ ವಿಜಯಕುಮಾರ್, ಚಂದ್ರಕಾಂತ ಕಾಳೇರ್, ಮಹೇಶ ಬಡಿಗೇರ್, ಮುಖಂಡರಾದ ಶಿವಶರಣಪ್ಪ ಕಮಲಾಪೂರ, ಚಂದ್ರಕಾಂತ ವನಮಾಲಿ, ಚಿತ್ರಶೇಖರ ದಂಡೋತಿಕರ್. ಪ್ರಭು ಪಾಟೀಲ್, ಅಬ್ದುಲ್ ರೌಫ್, ಪಪಂ ಸದಸ್ಯರಾದ ಗುರುರಾಜ ಮದ್ದೂರು, ಬಸವರಾಜ ಮಡಿವಾಳ, ಲಲಿತಾ ಬಾಯಿ ಕಮಲಾಪೂರ, ಸಾಲಿಯಾ ಬೇಗಂ ಬಿಜಾಪೂರ, ಶರಣಪ್ಪ ಬೇಲೂರು, ಉಷಾರಾಣಿ ಡಿ. ಗುತ್ತೇದಾರ, ಯುವ ಕರ್ನಾಟಕ ರಕ್ಷಣಾ ಸೇನೆ ಗೌರವಾಧ್ಯಕ್ಷ ಪರಮೇಶ್ವರ ಕಟ್ಟಿಮನಿ, ಬಾಬು ನಾಟೀಕರ್, ದಿಲೀಪ ಆರಣಕಲ್, ಅನೀಲಕುಮಾರ ಗುತ್ತೇದಾರ, ಇಬ್ರಾಹಿಂ ಶಾ, ಅವಿನಾಶ ಗುತ್ತೇದಾರ, ಮಂಜುನಾಥ ದಾಡಿನ ಸೇರಿದಂತೆ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.