ಕಲಬುರಗಿ | ಜಾತಿ ಕಾರಣಕ್ಕೆ ಮದುವೆ ನಿರಾಕರಿಸಿದ ಪ್ರಿಯಕರ: ನೊಂದ ಯುವತಿ ಆತ್ಮಹತ್ಯೆ
Update: 2024-05-11 15:26 IST
ಕಲಬುರಗಿ, ಮೇ 11: ಮದುವೆಯಾಗಲು ಪ್ರಿಯಕರ ನಿರಾಕರಿಸಿದ್ದರಿಂದ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರ ಹೊರವಲಯದ ಯಲ್ಲಾಲಿಂಗ್ ಕಾಲನಿಯಲ್ಲಿ ನಡೆಸಿದೆ.
ಆಳಂದ ತಾಲೂಕಿನ ಕೌಲಗಾ ಗ್ರಾಮದ ಪುಷ್ಪಾ(26) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಪುಷ್ಪಾ ನಗರದಲ್ಲಿ ಬಾಡಿಗೆ ರೂಮ್ ಪಡೆದು ವಾಸವಿದ್ದರು.
ಗಾಂಧಿ ನಗರದ ನಿವಾಸಿ ಕಿರಣ್ ಮತ್ತು ಪುಷ್ಪಾ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ. ಆದರೆ ಜಾತಿ ಕಾರಣಕ್ಕೆ ಪುಷ್ಪಾ ಜೊತೆಗೆ ವಿವಾಹಕ್ಕೆ ಕಿರಣ್ ಮನೆಯವರು ನಿರಾಕರಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಮನನೊಂದ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.