×
Ad

ಕಲಬುರಗಿ: ಧಾರಾಕಾರ ಮಳೆಗೆ ಮಳಖೇಡ ಕೋಟೆಯ ಗೋಡೆ ಕುಸಿತ

Update: 2024-09-26 12:51 IST

ಕಲಬುರಗಿ: ಜಿಲ್ಲೆಯ ಹಲವೆಡೆ ಕಳೆದೆರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಸೇಡಂ ತಾಲೂಕಿನಲ್ಲಿರುವ ಐತಿಹಾಸಿಕ ಮಳಖೇಡ ಕೋಟೆಯ ಗೋಡೆ ಗುರುವಾರ ಮತ್ತೆ ಕುಸಿದಿದೆ. ಆಗಸ್ಟ್ 31ರಂದು ಕೂಡಾ ಭಾರೀ ಮಳೆಗೆ ಕೋಟೆಯ ಗೋಡೆ ಉರುಳಿ ಬಿದ್ದಿತ್ತು.

ಗುರುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಕೋಟೆಯ ಗೋಡೆ ಏಕಾಏಕಿ ನೆಲಕ್ಕುರಳಿದೆ.

ಧಾರಾಕಾರ ಮಳೆಗೆ ಮನೆಗಳ ಮೇಲ್ಛಾವಣಿ ಕುಸಿತ: ಅಪಾರ ಹಾನಿ

ಚಿತ್ತಾಪುರ ತಾಲೂಕಿನಲ್ಲಿ ಕಳೆದ ಎರಡು ದಿನದಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಮನೆಗಳಿಗೆ ಹಾನಿ ಸಂಭವಿಸಿರುವುದು ವರದಿಯಾಗಿದೆ.

ಪಟ್ಟಣದ ವಾರ್ಡ್ ಸಂಖ್ಯೆ 13ರ ತನುಜಾ ಸುಭಾಷ್ ವಾರದ್ ಎಂಬವರ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಮನೆಯಲ್ಲಿನ ದಿನಬಳಕೆ ವಸ್ತು, ಆಹಾರ ಧಾನ್ಯಗಳು ಸೇರಿದಂತೆ ಅಪಾರ ಹಾನಿಯುಂಟಾಗಿದೆ.

ಪಟ್ಟಣದ ವಾರ್ಡ್ ಸಂಖ್ಯೆ 17ರಲ್ಲಿ ಒಂದು ಮನೆ, ವಾರ್ಡ್ ಸಂಖ್ಯೆ 13ರಲ್ಲಿ ಎರಡು ಮನೆ, ಕಡಬೂರ, ರಾಜೋಳ್ಳಾ, ಅಲ್ಲೂರ್ ಬಿ. ಗ್ರಾಮದಲ್ಲಿ ತಲಾ ಒಂದು ಮನೆಗಳು ಹಾನಿಯಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News