ಕಲಬುರಗಿ | ಅಂಗವಿಕಲರಿಗೆ ಮೆಡಿಕಲ್ ಕಿಟ್ ವಿತರಣೆ
Update: 2025-04-05 18:53 IST
ಕಲಬುರಗಿ : APD ಸಂಸ್ಥೆ ವತಿಯಿಂದ ಅಂಗವಿಕಲರಿಗೆ ಆರೋಗ್ಯ ಸಾಮಗ್ರಿಗಳು ಒಳಗೊಂಡ ಮೆಡಿಕಲ್ ಕಿಟ್ ಮತ್ತು ಗಾಲಿಕುರ್ಚಿ (Wheelchair) ವಿತರಣೆ ಮಾಡಲಾಯಿತು.
APD ಜಿಲ್ಲಾ CMHP ಸಂಯೋಜಕರಾದ ಅಲ್ಫಾ ಅವರ ಅಧ್ಯಕ್ಷತೆಯಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾಧಿಕ್ ಹುಸೇನ್ ಖಾನ್ ಭಾಗವಹಿಸಿದರು. ಹನಮಂತಪ್ಪ ಮತ್ತು ಜಿಲ್ಲಾ SCI ಸಂಯೋಜಕ ಶಿವಶಂಕರ್ ಬುರ್ಲಿ ಸೇರಿದಂತೆ ಅಂಗವಿಕಲರು ಮತ್ತು ಪೋಷಕರು ಉಪಸ್ಥಿತರಿದ್ದರು