ಕಲಬುರಗಿ | ಮೀನಾಕ್ಷಿ ಬಾಳಿ, ಸುಜಾತಾ ಚಲವಾದಿಗೆ ದತ್ತಿ ಪ್ರಶಸ್ತಿ
Update: 2025-09-03 17:01 IST
ಕಲಬುರಗಿ : ಕರ್ನಾಟಕ ಲೇಖಕಿಯರ ಸಂಘ ನೀಡುವ 2024ನೇ ಸಾಲಿನ 'ವಿಜಯಕಲಕೋಟಿ ಪ್ರಶಸ್ತಿ'ಗೆ ಚಿಂತಕಿ, ಮಹಿಳಾ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಅವರ 'ವಚನ ನಿಜದರ್ಶನ' ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಅಧ್ಯಯನ ಮಂಡಳಿ ಸದಸ್ಯೆ ಸುಜಾತಾ ಚಲವಾದಿ ಅವರ 'ಲಚಮವ್ವ ಮತ್ತು ಇತರ ಕತೆಗಳು' ಕಥಾ ಸಂಕಲನಕ್ಕೆ ತ್ರಿವೇಣಿ ದತ್ತಿ ನಿಧಿಯ ಪ್ರಥಮ ಬಹುಮಾನ ಲಭಿಸಿದೆ.
ಇಬ್ಬರಿಗೂ ಪ್ರಶಸ್ತಿ ಬಂದಿದ್ದಕ್ಕೆ ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ, ಸಂದರ್ಶಕ ಪ್ರಾಧ್ಯಾಪಕ ಶ್ರೀಶೈಲ ನಾಗರಾಳ, ಸೂರ್ಯಕಾಂತ ಸುಜ್ಯಾತ ಹಾಗೂ ಕನ್ನಡ ಅಧ್ಯಯನ ಮಂಡಳಿಯ ಎಲ್ಲ ಸದಸ್ಯರು, ಉಪನ್ಯಾಸಕ ಬಳಗ ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.