ಕಲಬುರಗಿ : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೇಡಂ ಸಹಾಯಕ ಆಯುಕ್ತರ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪ್ರತಿನಿಧಿಗಳ ಸಭೆ ನಡೆಯಿತು.

ಸಹಾಯಕ ಆಯುಕ್ತರ ಪರವಾಗಿ ಗ್ರೇಡ್‌-2 ತಹಶೀಲ್ದಾರ್‌ ಶಿವರಾಜಕುಮಾರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಹೊಸ ಮತದಾರರ ಸೇರ್ಪಡೆ, ಮೃತಪಟ್ಟವರು, ಸ್ಥಳಾಂತರಗೊಂಡವರು ಹಾಗೂ ಬೇರೆಡೆ ನೋಂದಣಿಯಾದ ಮತದಾರರ ವಿವರಗಳನ್ನು ಪರಿಶೀಲಿಸಲಾಯಿತು.

ಸಭೆಯಲ್ಲಿ ಮಂಡಿಸಿದ ಅಂಕಿ-ಅಂಶಗಳ ಪ್ರಕಾರ, 2025ರ ಜನವರಿ 6ರ ಮತದಾರರ ಪಟ್ಟಿಯಲ್ಲಿ 2,36,786 ಮತದಾರರಿದ್ದರು. ಎಸ್‌ಐಆರ್‌ಗೂ ಮುನ್ನ 1,95,295 ಮತದಾರರಿದ್ದು, ಪರಿಷ್ಕರಣೆ ಬಳಿಕ 1,98,780 ಮತದಾರರು ದಾಖಲಾಗಿದ್ದಾರೆ. ಈ ಅವಧಿಯಲ್ಲಿ 3,485 ಹೊಸ ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ. ಅಲ್ಲದೆ, ಮೃತಪಟ್ಟ 9, ಸ್ಥಳಾಂತರಗೊಂಡ 96 ಹಾಗೂ ಬೇರೆಡೆ ನೋಂದಣಿಯಾದ 56 ಮತದಾರರು ಸೇರಿದಂತೆ ಒಟ್ಟು 161 ಮತದಾರರ ವಿವರಗಳನ್ನು ಪರಿಶೀಲಿಸಲಾಯಿತು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಬಸವಂತರಾವ ಪಾಟೀಲ, ಅಬ್ದುಲ್ ಸತ್ತಾರ್ ನಾಡೇಪಲ್ಲಿ, ಬಸಯ್ಯ ಸ್ವಾಮಿ, ಬಿಜೆಪಿ ಮುಖಂಡರಾದ ತಿರುಪತಿ ಶಬಾದಕರ್, ಮಹಾನಂದ ಸಾಹು, ಅಬ್ದುಲ್ ರಶೀದ್, ಜೆಡಿಎಸ್ ತಾಲೂಕಾಧ್ಯಕ್ಷ ವೆಂಕಟರೆಡ್ಡಿ ಪಾಟೀಲ ಗಾಡದಾನ ಹಾಗೂ ಆಮ್ ಆದ್ಮಿ ಪಕ್ಷದ ದೊಡ್ಡಪ್ಪ ಜಿ. ಮಳಖೇಡ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor