Kalaburagi | ಮಹಿಳಾ ಜನಜಾಗೃತಿ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನಾಗಮಣಿ ನೇಮಕ
ಕಲಬುರಗಿ: ಕರ್ನಾಟಕ ಮಹಿಳಾ ಪರ ಜನಜಾಗೃತಿ ಸಮಿತಿಯ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನಾಗಮಣಿ ಎಸ್. ತೆಗನೂರ ಅವರನ್ನು ನೇಮಕ ಮಾಡಲಾಗಿದೆ.
ಸಮಿತಿಯ ರಾಜ್ಯಾಧ್ಯಕ್ಷೆ ಜಗದೇವಿ ಆರ್. ಹೆಗಡೆ ಅವರ ಆದೇಶದ ಮೇರೆಗೆ ರಾಜ್ಯ ಕಾರ್ಯಕಾರಿ ಸಮಿತಿಯ ಅನುಮೋದನೆಯೊಂದಿಗೆ ಈ ನೇಮಕ ಮಾಡಲಾಗಿದೆ.
ಮಹಿಳೆಯರ ಮೇಲಿನ ಅನ್ಯಾಯ, ಅತ್ಯಾಚಾರ, ಶೋಷಣೆ ಹಾಗೂ ದೌರ್ಜನ್ಯಗಳ ವಿರುದ್ಧ ಹೋರಾಟ ನಡೆಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು ಸಮಿತಿಯ ಮುಖ್ಯ ಉದ್ದೇಶವಾಗಿದೆ. ಸಂಘಟನೆಯನ್ನು ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಬಲಪಡಿಸುವುದರೊಂದಿಗೆ ಮಹಿಳೆಯರ ಹಕ್ಕುಗಳ ರಕ್ಷಣೆ ಮತ್ತು ಕ್ಷೇಮಾಭಿವೃದ್ಧಿಗೆ ನಿರಂತರವಾಗಿ ಶ್ರಮಿಸುವಂತೆ ನೂತನ ಪದಾಧಿಕಾರಿ ನಾಗಮಣಿ ಎಸ್. ತೆಗನೂರ ಅವರಿಗೆ ರಾಜ್ಯಾಧ್ಯಕ್ಷೆ ಸೂಚಿಸಿದ್ದಾರೆ.