ಕಲಬುರಗಿ | ಸಚಿವ ಪ್ರಿಯಾಂಕ್ ಖರ್ಗೆ ಹುಟ್ಟು ಹಬ್ಬ : ಅಭಿಮಾನಿಗಳಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
Update: 2025-11-22 18:49 IST
ಕಲಬುರಗಿ : ಸಚಿವ ಪ್ರಿಯಾಂಕ್ ಖರ್ಗೆ ಅವರ 47ನೇ ಹುಟ್ಟು ಹಬ್ಬದ ಪ್ರಯುಕ್ತ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಸೇಡಂ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಈಶ್ವರಾಜ ಮಾದವರ, ಗೌತಮ್ ಆರ್ ಹಳ್ಳಿ, ಸುನೀಲ್ ಎಸ್ ರಾಂಪೂರ, ಸಂತೋಷ ಜಾಕನಹಳ್ಳಿ, ರಾಘು ವಾಲಿಕಾರ, ಶಿವಾನಂದ ಬರಮಕರ, ಪ್ರಶಾಂತ್ ಗದ್ದಗಿ, ಮಲ್ಲಪ್ಪ ಪೂಜಾರಿ, ಶರಣು ಹೊಸೂರ್, ಕೈಲಾಸ ಮೌರ್ಯ, ಸುನೀಲ್ ಕರಣಿ ಮೂಗನೂರ ಸೇರಿದಂತೆ ಮತ್ತಿತರ ಉಪಸ್ಥಿತರಿದ್ದರು.