ಕಲಬುರಗಿ | ಚೌಡಾಪುರದಲ್ಲಿ ಅದ್ದೂರಿಯಾಗಿ ಮೊಹರಂ ಆಚರಣೆ
ಅಫಜಲಪುರ: ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಪವಿತ್ರ ಮೊಹರಂ ಹಬ್ಬವನ್ನು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಲಾಯಿತು.
ಮುಖಂಡ ರಾಜು ಜಮಾದಾರ ಅವರ ನೇತೃತ್ವದಲ್ಲಿ ನಡೆದ ಉತ್ಸವದಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಾವಿರಾರು ಭಕ್ತರು ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಬಸವರಾಜ ಮುತ್ಯಾ, ಮಹಾಂತಪ್ಪ ಮುತ್ಯಾ, ಶರಣಪ್ಪ ಮುತ್ಯಾ ಹಾಗೂ ಇಮಾಮಸಾಬ್ ಮುತ್ಯಾ ಅವರ ದಿವ್ಯ ಸಾನಿಧ್ಯದಲ್ಲಿ ಮೊಹರಂ ಉತ್ಸವ ವಿಜೃಂಭಣೆಯಿಂದ ನಡೆಯಿತು.ಮೊಹರಂ ಪದ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಚೌಡಾಪುರ ವಲಯದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ರಾಜು ಜಮಾದಾರ, ಕರುವೇ ಅಧ್ಯಕ್ಷರು ರಾಜು ಜಮಾದಾರ್ ಶರಣಪ್ಪ ಕಲಿಕೇರಿ ಮಹಾಂತಪ್ಪ ಮುಕುಂದಪ್ಪ ಜಮಾದಾರ ರಘುನಾಥ, ಸೂರ್ಯವಂಶಿ ದತ್ತಣ್ಣ ಸೆಂಡಿಗೆ ದಸ್ತಗಿರಿ ಮುಲ್ಲಾ ಸಾಯಿಬಣ್ಣ ಜಮಾದಾರ ಮಲಿಕ್ ಸಪ್ಪಣಗಳು ಆನಂದ ವಾಡೆದ್ ರೇವಣಸಿದ್ಧ ವಾಡೆದ, ದೇವೇಂದ್ರ ಜಮಾದಾರ, ಅಲಿಸಾಬ್ ಮುಲ್ಲಾ, ಆಸಿಫ್ , ನಾಗಯ್ಯ ಗುತ್ತೇದಾರ್, ಹುಲಿಯಪ್ಪ ಪೂಜಾರಿ ಅಂಬರಾಯಗುತ್ತೇದಾರ್, ಲಕ್ಷ್ಮಿಕಾಂತ ಅಲಕುಂಟೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.