×
Ad

ಕಲಬುರಗಿ| ಕತ್ತು ಹಿಸುಕಿ ವೃದ್ಧೆಯ ಕೊಲೆ : ಪ್ರಕರಣ ದಾಖಲು

Update: 2025-11-20 19:44 IST

ಕಲಬುರಗಿ: ಕತ್ತು ಬಿಗಿದು ವೃದ್ಧೆಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಕಮಲಾಪುರ ತಾಲೂಕಿನ ಧಮ್ಮೂರ ಪುನರ್ವಸತಿ ಕೇಂದ್ರದಲ್ಲಿ ಬುಧವಾರ ರಾತ್ರಿ ನಡೆದಿದೆ.  

ರಾಧಾಬಾಯಿ ಅಣ್ಣಪ್ಪ ಮೇಲಕೇರಿ (70) ಕೊಲೆಯಾದ ವೃದ್ಧೆ ಎಂದು ಗುರುತಿಸಲಾಗಿದೆ.

ಧಮ್ಮೂರ ಪುನರ್ವಸತಿ ಕೇಂದ್ರದಲ್ಲಿನ ಮನೆಯಲ್ಲಿ ಕೊಲೆ ನಡೆದಿದೆ. ಈ ಕುರಿತು ರಾಧಾಭಾಯಿ ಪುತ್ರ  ಮಲ್ಲಿಕಾರ್ಜುನ ಪೊಲೀಸರಿಗೆ ದೂರು ನೀಡಿದ್ದಾರೆ.  ವೃದ್ಧೆಯ ಕತ್ತಿನಲ್ಲಿ ಗಾಯಗಳು ಕಂಡು ಬಂದಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಡಿವೈಎಸ್‌ಪಿ ಲೋಕೇಶ್ವರ ಪೂಜಾರಿ, ಪಿಎಸ್‌ಐ ಬಸವರಾಜ ಚಿತ್ರಕೋಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಮಹಾಗಾoವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News