ಕಲಬುರಗಿ: ನಾಲ್ವಡಿ ಕೃಷ್ಣರಾಜ ಒಡೆಯರ್, ಸಾಹುಮಹಾಜರ ಕುರಿತು ವಿಚಾರ ಸಂಕಿರಣ

Update: 2026-08-20 19:41 IST

ಕಲಬುರಗಿ: ಸಮಾಜದಲ್ಲಿ ಜಾತಿ ತಾರತಮ್ಯ ಮತ್ತಷ್ಟು ಹೆಚ್ಚಾಗುತ್ತಿದ್ದು, ಪ್ರಜ್ಞಾವಂತರು ಜಾತಿ ಅಳಿಸುತ್ತ ಸಾಮಾಜಿಕ ಸಾಮರಸ್ಯ ಬೆಳೆಸಬೇಕು ಎಂದು ಹಿರಿಯ ಸಾಹಿತಿ ಧರ್ಮಣ್ಣ ಎಚ್ ಧನ್ನಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ಸಮತಾ ಸೈನಿಕ ದಳ ಜಿಲ್ಲಾ ಘಟಕ ಏರ್ಪಡಿಸಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸಾಹು ಮಹಾರಾಜರ ಕುರಿತಾದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮೀಸಲಾತಿಯ ಜನಕರಾದ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕೊಲ್ಹಾಪುರದ ಛತ್ರಪತಿ ಸಾಹು ಮಹಾರಾಜರ ಸಾಮಾಜಿಕ ನ್ಯಾಯದ ಕೊಡುಗೆಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ. ಆದರೆ ಜಾತಿ ವ್ಯವಸ್ಥೆ ಹೆಚ್ಚುತ್ತಿರುವುದಕ್ಕೆ ಅವರು ಕಳವಳ ವ್ಯಕ್ತಪಡಿಸಿದರು.

ಪ್ರಾಧ್ಯಾಪಕಿ ಡಾ.ಪುಟ್ಟಮಣಿ ದೇವಿದಾಸ ಅವರು ಸಮಾರಂಭ ಉದ್ಘಾಟಿಸಿ ಮಾತನಾಡಿ, ಜಾತಿ ವ್ಯವಸ್ಥೆ ನಿರ್ಮಾಲನೆ, ದೇವದಾಸಿ ಪದ್ಧತಿ ನಿಷೇದ ಸೇರಿ ಅನೇಕ ಪ್ರಗತಿ ಪೂರಕ ಕಾರ್ಯ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು ಎಂದು ಅವರು ಸ್ಮರಿಸಿದರು. ಬುದ್ದ ಬಸವ ಡಾ.ಅಂಬೇಡ್ಕರವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.

ಕರ್ನಾಟಕ ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷ ಸಂಜೀವಕುಮಾರ ಟಿ ಮಾಲೆ ಅವರು ಅಧ್ಯಕ್ಷತೆ ವಹಿಸಿ, ಬಹುಜನ ನಾಯಕರ ತತ್ಪಾದರ್ಶಗಳನ್ನು ಇಂದಿನ ಶೋಷಿತ ಸಮುದಾಯಕ್ಕೆ ಮುಟ್ಟಿಸಲು ಮುಂದಾಗಬೇಕು ಎಂದರು.

ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ಅಲೆಮಾರಿ ಬುಡಕಟ್ಟು ಮಹಾಸಭೆಯ ರಾಜ್ಯ ಉಪಾಧ್ಯಕ್ಷ ಅನೀಲಕುಮಾರ ಎಸ್. ಕಾಂಬಳೆ, ರಾಜ್ಯ ಗೌರವಾಧ್ಯಕ್ಷ ಶಂಕರ ಫಿರಂಗೆ, ಶಿವಾನಂದ ಎಸ್. ಸಾಗರ,  ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ, ಗಾಯಕ ಸುಭಾಷ ಬನ್ನಬಟ್ಟಿ, ಸರ್ಕಾರಿ ಪ್ರೌಢಶಾಲೆ ಪಾಳಾ (ಬಿ)ಯ ಸಹ ಶಿಕ್ಷಕಿ ಡಾ. ಕಾವೇರಿ ಕುದಂಪುರೆ ಹಾಗೂ ಪಾಳಾ (ಬಿ). ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಗೀತಾ ಭರಣಿ, KSSD ಬೀದರ್‌ ಜಿಲ್ಲಾಧ್ಯಕ್ಷ ಅಂಬಾದಾಸ ಸೋನಿ, ಬಸವೇಶ್ವರ ಆಸ್ಪತ್ರೆಯ ಸಿಬ್ಬಂದಿ ವಿಜಯಲಕ್ಷ್ಮೀ ಸೇರಿದಂತೆ ಇತರರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News