ಕಲಬುರಗಿ | ಅಫ್ಝಲ್ ಪುರ ಪೊಲೀಸ್ ಠಾಣೆಯಿಂದ ಪೊಕ್ಸೊ ಪ್ರಕರಣದ ಆರೋಪಿ ಪರಾರಿ
Update: 2026-07-03 11:09 IST
ಕಲಬುರಗಿ: ಪೊಕ್ಸೊ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯೋರ್ವ ಅಫ್ಝಲ್ ಪುರ ಪೊಲೀಸ್ ಠಾಣೆಯ ಲಾಕ್ ಅಪ್ ನಿಂದ ಪರಾರಿಯಾಗಿರುವ ಘಟನೆ ನಡೆದಿದೆ.
ಪೊಕ್ಸೊ ಪ್ರಕರಣವೊಂದಕ್ಕೆ ಸಂಬಂಧಿಸಿ ವಾರದ ಹಿಂದೆ ಮಂಜುನಾಥ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿಯನ್ನು ಬಂಧಿಸಿ ಅಫ್ಝಲ್ ಪುರ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಆದರೆ ಗುರುವಾರ ಮಧ್ಯರಾತ್ರಿ ಆತ ಲಾಕ್ ಅಪ್ ನಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ಪರಾರಿಯಾಗಿರುವ ದೃಶ್ಯಗಳು ಸ್ಥಳೀಯ ಅಂಗಡಿಗಳ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪ್ರಕರಣದ ಕುರಿತು ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಗೃಹಸಚಿವ ಪ್ರಿಯಾಂಕ್ ಖರ್ಗೆಯವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.