×
Ad

ಕಲಬುರಗಿ| ಮಕ್ಕಳ ಪ್ರತಿಭೆಯ ಅಭಿವ್ಯಕ್ತಿಗೆ ಮುಕ್ತ ವೇದಿಕೆ ಪ್ರತಿಭಾ ಕಾರಂಜಿ: ಯುವರಾಜ್ ಗಾಡಿ

Update: 2025-11-28 22:14 IST

ಕಲಬುರಗಿ: ಮಕ್ಕಳಲ್ಲಿ ಪ್ರತಿಭೆಯೆನ್ನುವುದು ಪಠ್ಯವಿಷಯವನ್ನು ಹೊರತು ಪಡಿಸಿಯೂ ಸುಪ್ತವಾಗಿ ಅಡಗಿರಬಹುದು. ಅದು ಸಂಗೀತ, ಚಿತ್ರಕಲೆ, ನೃತ್ಯ, ಮಿಮಿಕ್ರಿ, ಭಾಷಣ, ಭಾಷಾಕೌಶಲ್ಯ ಹೀಗೆ ಯಾವುದೇ ರೂಪದಲ್ಲಿ ಅಂತರ್ಗತ ಆಗಿರುತ್ತದೆ. ಅದನ್ನು ಗುರುತಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅಫಜಲಪುರ ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ್ ಗಾಡಿ ಹೇಳಿದರು.

ಅಫಜಲಪುರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉರ್ದು ಪ್ರಾಥಮಿಕ ಶಾಲೆಗಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪಠ್ಯ ಚಟುವಟಿಕೆಗಳು ನಿರಂತರ ನಡೆಯಬೇಕಾದರೆ ಶಿಕ್ಷಕರು ದಿನನಿತ್ಯ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗುವುದು ಎಷ್ಟು ಮುಖ್ಯವೋ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಕಲೆಯನ್ನು ಪೋಷಿಸುವುದು ಕೂಡ ಅಷ್ಟೇ ಮುಖ್ಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಸೆಯ್ಯದ್ ಪಟೇಲ್‌ ಅವರು ವಹಿಸಿದ್ದರು. ಸಿ.ಆರ್.ಪಿ ಅಬ್ದುಲಸತ್ತಾರ, ಇ.ಸಿ.ಓ ಶೇಖಸಾಹೇಬ ಶೇಖ, ಭಿಮರಾಯ ದೂಡಮನಿ, ಮಹಮ್ಮದ್‌ ಫಾರೂಕ್‌ ಮಣೂರ , ಮುಸಾ ಪಟೇಲ್, ಅನಸರಸಾಬ ಜಮಾದಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಹಮ್ಮದ್‌ ಇಲಿಯಾಸ್‌, ಹುಸೇನಸಾಹೇಬ, ಜಹಾಂಗೀರ್ ಬಾದಶಾ, ಗಾಲಿಬ ಮಸಾಲೆವಾಲೆ, ರಸೂಲ ಮುಲ್ಲಾ, ಸೈಫಸಶಾ, ಅನ್ಸರ ಸಿಂದಗಿ, ಗಾಲಿಬ ಸಿಕಲಗಾರ, ಮಹ್ಮದ ಫರೀದ ಅಹ್ಮದ, ಸಿದ್ದು ಮ್ಯಾಳೆಸಿ, ಮಹೇಶ, ಪ್ರಕಾಶ, ಜಗದೀಶ್, ಶಬಾನಾ ಬೇಗಂ, ಫಹಮೇದಾ ಬೇಗಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News