×
Ad

ಕಲಬುರಗಿ | ಸಮಾಜ ಸೇವಕರಿಗೆ ʼಸೇವಾಶ್ರೀʼ ಪ್ರಶಸ್ತಿ ಪ್ರದಾನ

Update: 2025-05-04 21:15 IST

ಕಲಬುರಗಿ : ವೈಯಕ್ತಿಕ ಪೂಜೆಗಳಿಂದ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಬಂದರೆ ನಿಸ್ವಾರ್ಥದಿಂದ ಮಾಡುವ ಧಾರ್ಮಿಕ ಸೇವೆಗಳಿಂದ ಇಡೀ ಸಮಾಜದ ಸಂಘಟನೆಗೆ ಶಕ್ತಿಯಾಗುತ್ತದೆ ಎಂದು ಭೀಮೇಶ್ವರ ದೇವಸ್ಥಾನದ ಟ್ರಸ್ಟ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರಭದ್ರಯ್ಯ ಸಾಲಿಮಠ ಅಭಿಪ್ರಾಯ ವ್ಯಕ್ತಪಡಿಸಿದರು.

ಟೆಂಗಳಿಯ ಅಂಡಗಿ ಪ್ರತಿಷ್ಠಾನವು ಶ್ರೀ ಭೀಮೇಶ್ವರ ಜಾತ್ರೆಯಲ್ಲಿ ಧಾರ್ಮಿಕ ಸೇವೆ ಸಲ್ಲಿಸಿದ ಸೇವಾಕರ್ತರಿಗೆ ಸೇವಾಶ್ರೀ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿನೋದಕುಮಾರ ಜನೇವರಿ, ಗುಂಡಪ್ಪ ಪಟೇದ, ಡಾ.ವಿವೇಕಾನಂದ ಬುಳ್ಳಾ, ರಾಜಕುಮಾರ ಪಟೇದ, ಚಂದ್ರುಕಡಲಿ, ನಾಗು ಪಟೇದ, ಬಸವರಾಜ ಘಂಟಿ, ಉದಯಕುಮಾರ ಪಟೇದ, ವಿಜಯಕುಮಾರ ಪಟೇದ ಹಾಗೂ ಇತರರು ಉಪಸ್ಥಿತರಿದ್ದರು.

ಎಂ.ಎನ್. ಸುಗಂಧಿ ಪ್ರಾರ್ಥಿಸಿದರು, ಸಿದ್ರಾಮಪ್ಪ ಅಂಡಗಿ ಸ್ವಾಗತಿಸಿದರು, ಭೀಮಾಶಂಕರ ಅಂಕಲಗಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News