×
Ad

ಕಲಬುರಗಿ| ಶಹಾಬಾದ ನಗರ ಸಭೆ ಉಪಚುನಾವಣೆ: ಕಾಂಗ್ರೆಸ್‌ ಗೆ ಭರ್ಜರಿ ಜಯ

Update: 2023-12-30 14:46 IST

ಕಲಬುರಗಿ: ಇಲ್ಲಿನ ಶಹಾಬಾದ ನಗರ ಸಭೆ ವಾರ್ಡ್ ನಂ.25 ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುತಲಾ ಕಾಶಿನಾಥ್ ಜೋಗಿ 312 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಅವರು ಒಟ್ಟು 748 ಮತಗಳನ್ನು ಪಡೆದಿದ್ದಾರೆ. ಇನ್ನು ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿದ್ದ ಎಸ್.ಡಿ.ಪಿ.ಐ ಅಭ್ಯರ್ಥಿ ಬಿಜಾನ ಬೇಗಂ ಅವರು 436 ಮತಗಳನ್ನು ಪಡೆದು ಸೋಲು ಅಭವಿಸಿದ್ದಾರೆ.

ಈ ಉಪ ಚುನಾವಣೆಯಲ್ಲಿ ಬಿಜೆಪಿ  ಅಭ್ಯರ್ಥಿ ಸಂಗೀತ ವೆಂಕಟೇಶ್ 55 ಮತ್ತು ಜೆಡಿಎಸ್‌ ಪಕ್ಷದ ಲತಾ ದೇವಾನಂದ 47 ಮತ ಪಡೆದು ಹೀನಾಯ ಸೋಲು ಅನುಭವಿಸಿದ್ದಾರೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಎಂ.ಎ ರಶೀದ್, ಮೃತ್ಯುಂಜಯ ಹಿರೇಮಠ್, ವಿಜಯ್ ಕುಮಾರ್ ಮುತ್ತಟ್ಟಿ,ಅನ್ವರ್ ಪಾಷಾ, ನಾಗಣ್ಣ ರಾಂಪುರ, ಸಾಯಿಗೌಡ ಬೋಗೊಂಡಿ, ಶರಣು ಪಗಲಪುರ್, ಉಬೈದ್‌, ಜಾವಿದ್, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News