ಕಲಬುರಗಿ | ಬಸವೇಶ್ವರ ಆಸ್ಪತ್ರೆಯಲ್ಲಿ ಶಶೀಲ್ ನಮೋಶಿಯವರ ಜನ್ಮ ದಿನಾಚರಣೆ
ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ.ನಮೋಶಿಯವರ ಜನ್ಮದಿನಾಚರಣೆಯನ್ನು ನಗರದ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ರಾಜಾ ಭಿ. ಭೀಮಳ್ಳಿ, ಜಂಟಿ ಕಾರ್ಯದರ್ಶಿ ಡಾ. ಕೈಲಾಸ ಪಾಟೀಲ್, ಆಸ್ಪತ್ರೆಯ ಸಂಚಾಲಕರು ಡಾ. ಕಿರಣ್ ದೇಶಮುಖ್ ಮತ್ತು ಡಾ. ಶರಣಬಸಪ್ಪ ಹರವಾಳ, ಆಡಳಿತ ಮಂಡಳಿ ಸದಸ್ಯರಾದ ಡಾ. ಅನಿಲಕುಮಾರ ಪಟ್ಟಣ, ಡಾ. ಮಹಾದೇವಪ್ಪ ರಾಂಪೂರೆ, ಸಾಯಿನಾಥ ಪಾಟೀಲ್, ಡೀನ್ ಡಾ. ಶರಣಗೌಡ ಪಾಟೀಲ್, ವೈಸ್ ಡೀನ್ ಡಾ. ವಿಜಯಕುಮಾರ್ ಕಪ್ಪಿಕೇರಿ, ಡಾ. ಗುರುಲಿಂಗಪ್ಪ ಪಾಟೀಲ್, ಆಡಳಿತಾಧಿಕಾರಿ ಡಾ. ಎಂ.ಆರ್. ಪೂಜಾರಿ, ಡಾ. ಶಿವಾನಂದ ಮೆಳಕುಂದಿ, ವಿಶೇಷಾಧಿಕಾರಿ ಡಾ. ಪರಮೇಶ ಬಿರಾದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ನಂತರ ‘ಬಸವ ಪ್ರಸಾದ್ ಯೋಜನೆ’ ಅಡಿಯಲ್ಲಿ ಶಶೀಲ್ ಜಿ.ನಮೋಶಿಯವರು ತಮ್ಮ ತಂದೆ ಲಿಂ.ಗಂಗಾಧರ ನಮೋಶಿಯವರ ಹೆಸರಿನಲ್ಲಿ ಆಸ್ಪತ್ರೆಯ ರೋಗಿಗಳಿಗೆ ಉಚಿತ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡರು.