Kalaburagi | ಎಸ್‌ಐಆರ್ ಪ್ರಕ್ರಿಯೆ; ಸಾವಿರಾರು ಮತದಾರರು ಹಕ್ಕು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ : ಡಾ. ಅಸ್ಗರ್ ಚುಲ್ಬುಲ್ ಆತಂಕ

Update: 2026-08-05 20:12 IST

ಕಲಬುರಗಿ, ಆ.5: ಜಿಲ್ಲೆಯಾದ್ಯಂತ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್‌ಐಆರ್) ಹಾಗೂ ಮತದಾರರ ಮಾಹಿತಿ ನಮೂನೆ (Enumeration Form) ಅಭಿಯಾನದಲ್ಲಿ ಗಂಭೀರ ಅಂಕಿ-ಅಂಶಗಳ ವ್ಯತ್ಯಾಸ ಕಂಡುಬಂದಿದ್ದು, ಸಾವಿರಾರು ಮತದಾರರು ಮತದಾನದ ಹಕ್ಕು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ ಎಂದು ಕುಡಾ ಮಾಜಿ ಅಧ್ಯಕ್ಷ ಡಾ.ಮು೭ಹಮ್ಮದ್ ಅಸ್ಗರ್ ಚುಲ್ಬುಲ್ ಆತಂಕ ವ್ಯಕ್ತಪಡಿಸಿದರು.

ನಗರದ ನೂರ್‌ಬಾಗ್‌ನಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್‌ 4, 2026ರ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯ ಒಟ್ಟು 23,71,542 ಮತದಾರರ ಪೈಕಿ 18,34,829 ಮತದಾರರ ಮಾಹಿತಿ ಮಾತ್ರ ಡಿಜಿಟಲೀಕರಣಗೊಂಡಿದ್ದು, ಉಳಿದ 5,36,712 ಮತದಾರರನ್ನು ಎಎಸ್‌ಡಿಡಿಒ (ASDDO) ವರ್ಗದಲ್ಲಿ ಗುರುತಿಸಲಾಗಿದೆ. ಇದರಿಂದ ಅವರು ಮತದಾರರ ಪಟ್ಟಿಯಿಂದ ಕೈಬಿಡುವ ಅಪಾಯದಲ್ಲಿದ್ದಾರೆ ಎಂದು ಹೇಳಿದರು.

ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 2,97,785 ಮತದಾರರ ಪೈಕಿ 1,89,245 ನಮೂನೆಗಳು ಮಾತ್ರ ಸ್ವೀಕೃತವಾಗಿದ್ದು, 1,07,986 ಮತದಾರರು ಎಎಸ್‌ಡಿಡಿಒ ಪಟ್ಟಿಯಲ್ಲಿದ್ದಾರೆ. ಗುಲ್ಬರ್ಗಾ ಉತ್ತರ ಕ್ಷೇತ್ರದಲ್ಲಿ 3,35,254 ಮತದಾರರ ಪೈಕಿ 2,24,766 ನಮೂನೆಗಳು ಸ್ವೀಕೃತವಾಗಿದ್ದು, 1,10,487 ಮತದಾರರನ್ನು ಎಎಸ್‌ಡಿಡಿಒ ವರ್ಗದಲ್ಲಿ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ಒಟ್ಟು 2,18,413 ಮತದಾರರು ಎಎಸ್‌ಡಿಡಿಒ ವರ್ಗದಲ್ಲಿದ್ದು, ಇನ್ನೂ 2 ಲಕ್ಷಕ್ಕೂ ಹೆಚ್ಚು ಮತದಾರರು “ಅಸಂಗತತೆ” (Anomalies) ವರ್ಗಕ್ಕೆ ಸೇರುವ ಸಾಧ್ಯತೆ ಇದೆ. ಅವರಿಗೆ ನೋಟಿಸ್ ಜಾರಿಯಾಗುವ ಸಾಧ್ಯತೆಯೂ ಇದೆ ಎಂದು ಹೇಳಿದರು.

ಮತದಾನದ ಹಕ್ಕು ಕಾಪಾಡಿಕೊಳ್ಳಲು ನಾಗರಿಕರು ತಮ್ಮ ಮತಗಟ್ಟೆಗೆ ಭೇಟಿ ನೀಡಿ ನೋಟಿಸ್ ಬೋರ್ಡ್‌ನಲ್ಲಿ ಹೆಸರು ಪರಿಶೀಲಿಸಬೇಕು. ಹೆಸರು ಎಎಸ್‌ಡಿಡಿಒ ಪಟ್ಟಿಯಲ್ಲಿದ್ದರೆ ಸಂಬಂಧಿತ ಬಿಎಲ್‌ಒ ಅವರನ್ನು ಸಂಪರ್ಕಿಸಿ ಮಾಹಿತಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಈಗಾಗಲೇ ಮಾಹಿತಿ ನಮೂನೆ ಪಡೆದಿರುವವರು ಆಗಸ್ಟ್‌ 8ರೊಳಗೆ ಸಲ್ಲಿಸಬೇಕು. 2026ರ ಅಕ್ಟೋಬರ್‌ 10ಕ್ಕೆ 18 ವರ್ಷ ಪೂರೈಸುವ ಹೊಸ ಮತದಾರರು ಹಾಗೂ 2025ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ನಮೂನೆ–6 ಅನ್ನು ಆನ್‌ಲೈನ್‌ ಅಥವಾ ಸಂಬಂಧಿತ ಬಿಎಲ್‌ಒ ಮೂಲಕ ಸಲ್ಲಿಸಬೇಕು ಎಂದು ಮನವಿ ಮಾಡಿದರು.

2002ರ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, 2025ರ ಪಟ್ಟಿಯಲ್ಲಿ ಇಲ್ಲದವರೂ ನಮೂನೆ–6 ಸಲ್ಲಿಸಬೇಕು. 2025ರ ಪಟ್ಟಿಯಲ್ಲಿ ಹೆಸರು ಇದ್ದು, ಪೋಷಕರು ಅಥವಾ ಅಜ್ಜ–ಅಜ್ಜಿಯರ ಹೆಸರು 2002ರ ಪಟ್ಟಿಯಲ್ಲಿ ಇಲ್ಲದಿದ್ದರೆ ಮಾಹಿತಿ ನಮೂನೆಯ ಭಾಗ–‘ಸಿ’ (Part-C) ಭರ್ತಿ ಮಾಡಿ ಸಂಬಂಧಿತ ಬಿಎಲ್‌ಒಗೆ ಸಲ್ಲಿಸುವಂತೆ ಅವರು ಸೂಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News