ಕಲಬುರಗಿ| ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯಬೇಕೆಂದು ಅಭಿಮಾನಿಗಳಿಂದ ವಿಶೇಷ ಪೂಜೆ
ಕಲಬುರಗಿ: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರೇ ಮುಂದುವರಿಯಬೇಕೆಂದು ಸಿದ್ದರಾಮಯ್ಯನವರ ಅಭಿಮಾನಿಗಳು ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ 101 ತೆಂಗಿನಕಾಯಿ ಸಿಡಿಗಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಹಾಂತೇಶ್ ಕೌಲಗಿ, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಿನಿಂದ ರಾಜ್ಯದ ಜನರಿಗೆ ಸಾಕಷ್ಟು ಜನಪರ ಯೋಜನೆ ನೀಡಿದ್ದಾರೆ. ಘೋಷಿಸಿದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹಾಗಾಗಿ ಐದು ವರ್ಷ ಅವರೇ ಸಿಎಂ ಆಗಿ ಮುಂದುವರೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೇವಣಸಿದ್ದಪ್ಪಾ ಸಾತನೂರ, ಸಾಯಬಣ್ಣಾ ಹೇಳವರ, ಕುಮಾರ್ ಯಾದವ್, ಶರಣು ಬಿ. ಹೋನ್ನಗೇಜೆ, ಚಂದ್ರಶೇಖರ ಗೊಂದಳಿ, ಭೀಮಶ್ಯಾ ಖನ್ನಾ, ಮರೆಪ್ಪ ಹಳ್ಳಿ, ಎ.ಬಿ.ಹೊಸಮನಿ, ಅರ್ಜುನ ಗೊಬ್ಬರ, ಸಂಜುಕುಮಾರ ಜವಳಕರ, ನಿಂಗಪ್ಪಾ ಹೆರೂರ, ಡಾ.ಬಿ.ಟಿ.ಪೂಜಾರಿ, ಶರಣು ಕನಗೊಂಡ, ಭೈಲಪ್ಪಾ ನೆಲೋಗಿ, ಪರಮೇಶ್ವರ ಆಲಗೂಡ, ಶರಣು ಬೇಲೂರ, ಲಕ್ಷ್ಮಣ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.