×
Ad

ಕಲಬುರಗಿ | ಸಮಾನತೆ, ನ್ಯಾಯ ನೀಡುವ ಸಂವಿಧಾನ ಅಪಾಯದಲ್ಲಿದೆ : ಸರೋವರ ಬೆಂಕಿಕೆರೆ

Update: 2025-04-14 18:34 IST

ಕಲಬುರಗಿ : ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯವನ್ನು ಖಾತ್ರಿಪಡಿಸುವ ನಮ್ಮ ಸಂವಿಧಾನ ಇಂದು ಅಪಾಯದಲ್ಲಿದೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆ.ವಿ.ಎಸ್) ರಾಜ್ಯಾಧ್ಯಕ್ಷ ಸರೋವರ ಬೆಂಕಿಕೆರೆ ಹೇಳಿದರು.

ಸೋಮವಾರ ಸಂವಿಧಾನ ರಕ್ಷಣಾ ಪಡೆ, ದೇಶಪ್ರೇಮಿ ಯುವಾಂದೋಲನ, ಸಂವಿಧಾನ ಯುವಯಾನ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವಾದ ಎ.14 ರಿಂದ 25 ರವರೆಗೆ ಭೀಮಸ್ಪರ್ಶ ಭೂಮಿ ವಾಡಿ ಪಟ್ಟಣದಿಂದ ದಾವಣಗೆರೆ ವರೆಗೆ ಹಮ್ಮಿಕೊಂಡ ಬೃಹತ್ ಬೈಕ್ ಜಾಥಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಜಾತಿ ಧರ್ಮದ ಹೆಸರಿನಲ್ಲಿ ಸಮುದಾಯದೊಳಗೆ ಕೋಮು ದ್ವೇಷವನ್ನು ಬಿತ್ತಲಾಗುತ್ತದೆ. ಉದ್ಯೋಗ, ಪರಿಸರ, ಶಿಕ್ಷಣ ಸೇರಿದಂತೆ ಪ್ರಸ್ತುತ ಸಮಸ್ಯೆಗಳತ್ತ ಯುವಜನರ ಗಮನ ಹರಿಸದಂತೆ ದೇವರು ಧರ್ಮ ಗಳ ಹೆಸರಿನಲ್ಲಿ ದಂಗೆಗಳನ್ನು ನಡೆಸಲಾಗುತ್ತದೆ. ದ್ವೇಷದ ವಿರುದ್ಧ ಪ್ರೀತಿ ಹಂಚುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದು ಹೇಳಿದರು.

ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅಂಬೇಡ್ಕರ್ ಧ್ವಜ ತೋರಿಸುವ ಮೂಲಕ ಬೈಕ್ ರ್‍ಯಾಲಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಶ್ರಾವಣಕುಮಾರ ಮೋಸಲಿಗಿ, ಕಾರ್ಮಿಕ ಸಂಘದ ಅಧ್ಯಕ್ಷ ಶರಣಬಸು ಶಿರೂರಕರ, ಸತೀಶ ಭಟ್ಟರಕಿ ಮಲ್ಲಿಕಾರ್ಜುನ ಕಟ್ಟಿ, ಚಂದ್ರಸೇನ ಮೇನಗಾರ, ಖೇಮಲಿಂಗ ಬೆಳಮಗಿ, ರಮೇಶ ಬಡಿಗೇರ, ಸುಧಾಕರ ಗಾಯಕವಾಡ, ತಿಪ್ಪಣ್ಣ ಚೇಗುಂಟಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ರಾಜ್ಯ ಕಾರ್ಯದರ್ಶಿ ದುರ್ಗೆಶ ಬರಗೂರು, ದೇಶಪ್ರೇಮಿ ಯವಾಂದೋಲನ ಸಂಚಾಲಕ ಹೇಮಂತ, ಕೌಶಲ್ಯ, ಶಾಂತಾ,ಯಮುನಾ, ಮರಿಸ್ವಾಮಿ, ಶರಣು, ಉಮೇಶ, ರವಿ ನವಲಳ್ಳಿ, ಶರಣಕುಮಾರ ಯಮನೂರ ಸೇರಿದಂತೆ ಅನೇಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News