ಕಲಬುರಗಿ | ಪೌರಕಾರ್ಮಿಕರ ಶ್ರಮ ಆಡಳಿತ ವ್ಯವಸ್ಥೆಗೆ ಬಲ ನೀಡುತ್ತದೆ: ಪನಶೆಟ್ಟಿ
ಕಲಬುರಗಿ : "ಪೌರ ಕಾರ್ಮಿಕರು ನಗರದ ಸ್ವಚ್ಛತೆಯ ಬೆನ್ನೆಲುಬು ಅಷ್ಟೇ ಅಲ್ಲದೆ ಇವರ ಶ್ರಮವೂ ಆಡಳಿತ ವ್ಯವಸ್ಥೆಗೆ ದೊಡ್ಡ ಬಲವನ್ನು ತಂದುಕೊಡುತ್ತದೆ ಎಂದು ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರು ಹೇಳಿದರು.
ಆಳಂದ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸ್ಥಳೀಯ ಪೌರನೌಕರ ಸಂಘವು ಶುಕ್ರವಾರ ಪುರಸಭೆಯ ಪೌರ ಕಾರ್ಮಿಕರ ಮೇಲ್ವಿಚಾರಕಿ ಜಗದೇವಿ ಕೆ.ಕಡಗಂಚಿ ಅವರ ನಿವೃತ್ತಿ ಪ್ರಯುಕ್ತ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಜಗದೇವಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಪೌರ ನೌಕರರ ಸಂಘದ ಅಧ್ಯಕ್ಷ ಶಿವರಾಯ ಸರಸಂಬಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ ಜಗದೇವಿ ಅವರನ್ನು ಶಾಲುವನ್ನು ಹೊದಿಸಿ, ಸೀರೆ, ಕುಪ್ಪಸವನ್ನು ತೊಡಿಸಲಾಯಿತು. ಜೊತೆಗೆ, ಫಲ-ಪುಷ್ಪ ನೀಡಿ ಅವರ ಸೇವೆಗೆ ಸಲ್ಲಿಸಿದ ಕೃತಜ್ಞತೆ ಸ್ವೀಕರಿಸಿದ ಜಗದೇವಿ ಅವರು ತಮ್ಮ ಸೇವಾ ಅವಧಿಯ ಸ್ಮರಣೆಗಳನ್ನು ಹಂಚಿಕೊಂಡರು. "ಆಳಂದ ಪುರಸಭೆಯಲ್ಲಿ ಕೆಲಸ ಮಾಡಿದ್ದು ನನ್ನ ಜೀವನದ ಅತ್ಯಂತ ಮರೆಯಲಾಗದ ಅನುಭವ. ಎಲ್ಲರ ಸಹಕಾರದಿಂದ ನಾನು ನನ್ನ ಕರ್ತವ್ಯವನ್ನು ಪೂರೈಸಲು ಸಾಧ್ಯವಾಯಿತು ಎಂದು ಭಾವುಕರಾಗಿ ಹೇಳಿದರು.
ಈ ಸಂದರ್ಭದಲ್ಲಿ ಎಫ್‌ಡಿಎ ಶಿವರಾಯ ಮಂಗಲಗಿ, ಎಸ್‌ಡಿಎ ಶಫಿ ರೋತೆ, ಪುರಸಭೆ ಸದಸ್ಯ ಮೃತ್ಯುಂಜಯ ಆಲೂರೆ, ಮುಖಂಡ ಸಂಜಯ ನಾಯಕ, ರಾಜು ಷಣ್ಮೂಖ, ಎಸ್‌ಐ ಲಕ್ಷ್ಮಣ ತಳವಾರ, ಸಿದ್ಧಯ್ಯಾ ಸ್ವಾಮಿ, ನೌಕರ ಸಂಘದ ಉಪಾಧ್ಯಕ್ಷ ಜೀವರಾಜ ದೇವನೂರ, ಕಾರ್ಯದರ್ಶಿ ಸಿದ್ಧರಾಮ ಬಟಗೇರಿ, ಮಹಾದೇವಿ ಎಂ. ಮಟಕಿಕರ್ ಸೇರಿದಂತೆ ಮತ್ತಿತರರು ಇದ್ದರು.