ಕಲಬುರಗಿ | 17 ಕ್ವಿಂಟಾಲ್ ತೊಗರಿ ಬೇಳೆ ಕಳವು : ಇಬ್ಬರು ಆರೋಪಿಗಳ ಬಂಧನ
Update: 2024-10-28 22:49 IST
ಸಾಂದರ್ಭಿಕ ಚಿತ್ರ
ಕಲಬುರಗಿ : ಇಲ್ಲಿನ ನಂದಿಕೂರು ಕೈಗಾರಿಕಾ ಪ್ರದೇಶದ ದಾಲ್ ಮಿಲ್‌ನ ಶಟರ್ ಮುರಿದು 17 ಕ್ವಿಂಟಾಲ್ ತೊಗರಿ ಬೇಳೆ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈಶ್ವರ ಕಾಳನೂರ, ಮಹೇಶ್ ವಾಡೇಕರ್ ಬಂಧಿತ ಆರೋಪಿಗಳಾಗಿದ್ದಾರೆ. ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿರುವ ದಾಲ್ ಮಿಲ್‌ನ ಶೆಟರ್ ಮುರಿದು ಸುಮಾರು 1.48 ಲಕ್ಷ ರೂ. ಮೌಲ್ಯದ ತೊಗರಿ ಬೇಳೆ ತುಂಬಿದ್ದ ಚೀಲಗಳನ್ನು ಆರೋಪಿಗಳು ಹೊತ್ತೊಯ್ದಿದ್ದರು.
ಈ ಕುರಿತು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇದೀಗ ಆರೋಪಿಗಳನ್ನು ಬಂಧಿಸುವ ಮೂಲಕ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.