×
Ad

ಕಲಬುರಗಿ | ನಾಳೆ(ಮೇ17) ತಿರಂಗಾ ಯಾತ್ರೆ: ಅಶೋಕ ಬಗಲಿ

Update: 2025-05-16 15:23 IST

ಕಲಬುರಗಿ : ಪಾಕಿಸ್ತಾನ ಮೂಲದ ಭಯೋತ್ಪಾದಕರು, ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ 26 ಭಾರತೀಯರನ್ನು ಹತ್ಯೆ ಮಾಡಿರುವ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಭಯೋತ್ಪಾದಕರು ಹುಟ್ಟಡಿಗಿಸಿದೆ. ಈ ಕಾರ್ಯಚರಣೆಯ ಸೈನಿಕರಿಗೆ ಬೆಂಬಲವಾಗಿ ನಾಳೆ ಸಂಜೆ 4ಗಂಟೆಗೆ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಹೇಳಿದರು.

ನಗರದ ಪತ್ರಿಕ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಳೆ ಸಂಜೆ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಜಗತ್ ವರೆಗೆ ಬೃಹತ್ ತಿರಂಗಾ ಯಾತ್ರೆ ನಡೆಯಲಿದ್ದು, 'ನಾವು ಸೇನಾ ಪಡೆಯೊಂದಿಗೆ ಇದ್ದೇವೆ' ಮತ್ತು 'ಆಪರೇಷನ್ ಸಿಂಧೂರ ಜೊತೆ ರಾಷ್ಟ್ರ' ಎಂಬ ಬ್ಯಾನರ್ ಅಡಿ ಯಾತ್ರೆ ನಡೆಯಲಿದೆ. ಇದರಲ್ಲಿ ಪಕ್ಷಾತೀತವಾಗಿ ಸಾವಿರಾರು ಯುವಕರು, ಮಹಿಳೆಯರು, ಸೈನಿಕರು ಸೇರಿದಂತೆ ವಿರೋಧ ಪಕ್ಷದ ವಿವಿಧ ನಾಯಕರುಗಳು ಭಾಗವಹಿಸಲಿದ್ದಾರೆ ಎಂದರು.

ನಗರೇಶ್ವರದಿಂದ ಪ್ರಾರಂಭವಾಗುವ ಯಾತ್ರೆ, ಜಗತ್ ವೃತ್ತದಲ್ಲಿ ಸಂಪನ್ನಗೊಳ್ಳಲಿದೆ, ಸಮಾರೋಪದಲ್ಲಿ ಹಲವು ಗಣ್ಯ ವ್ಯಕ್ತಿಗಳು ವಿವಿಧ ಮಠಾಧೀಶರು ದೇಶ ಪ್ರೇಮದ ಬಗ್ಗೆ ಮಾತನಾಡಲಿದ್ದಾರೆ. ಅಲ್ಲದೆ ಯಾತ್ರೆಯಲ್ಲಿ ದೇಶಭಕ್ತಿಯ ಘೋಷಣೆಗಳು ದೇಶಭಕ್ತಿಯ ಗೀತೆಗಳು ಬಳಸಲಾಗುತ್ತದೆ, ಇದರಲ್ಲಿ ಯಾವುದೇ ಪ್ರತ್ಯೇಕ ಧರ್ಮ ಸಂಘಟನೆಗಳ, ಪಕ್ಷಗಳ ಧ್ವಜಗಳನ್ನು ಇರಿಸಲಾಗುವುದಿಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಶಶಿಲ್ ನಮೋಶಿ, ಬಸವರಾಜ್ ಮತ್ತಿಮಡು , ಅವಿನಾಶ್ ಜಾದವ್, ಅಮರ್ನಾಥ್ ಪಾಟೀಲ್, ಸಂತೋಷ್ ಹಾದಿಮನಿ, ಲಿಂಗರಾಜ್ ಬಿರಾದರ್, ಆನಂದ್ ಪಾಟೀಲ್ , ನಾಗರಾಜ ಮಹಾಗoವ್ಕರ್, ಬಾಬುರಾವ್ ಹಾಗರಗುಂಡಗಿ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News