ಕಲಬುರಗಿ | ಬಂಜಾರಾ ಸೇವಾ ಸಂಘದ ಕಾರ್ಯದರ್ಶಿಯಾಗಿ ವಿನೋದ್ ಚೌಹಾಣ್ ಆಯ್ಕೆ
Update: 2026-01-17 18:42 IST
ಕಲಬುರಗಿ : ಜಿಲ್ಲಾ ಬಂಜಾರ (ಲಂಬಾಣಿ) ಸೇವಾ ಸಂಘದ ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವಿನೋದ್ ಕುಮಾರ್ ಚೌಹಾಣ್ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘವು ಇತ್ತೀಚೆಗೆ ಸಭೆ ನಡೆಸಿ ಈ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಬಿ.ಬಿ ನಾಯಕ್ ತಿಳಿಸಿದ್ದಾರೆ.
ಕರ್ನಾಟಕ ಪ್ರದೇಶ ಲಂಬಾಣಿ ಸಮುದಾಯದಲ್ಲಿ ಕ್ರಿಯಾಶೀಲರಾಗಿ ಸಂಘಟನೆಗೆ ಶ್ರಮಿಸುತ್ತಿರುವ ವಿನೋದ್ ಕುಮಾರ್ ಚೌಹಾಣ್, ಪ್ರಧಾನ ಕಾರ್ಯದರ್ಶಿ ಸ್ಥಾನ ಅಲಂಕರಿಸಿರುವುದು ಸಂಘಕ್ಕೆ ಶಕ್ತಿ ಬಂದಿದೆ ಎಂದು ಸಭೆಯಲ್ಲಿ ಅಭಿಪ್ರಾಯದ ಆನಂದ ಚೌಹಾಣ್ ಚಿಂಚೋಳಿ, ಲಕ್ಷ್ಮಣ ಚೌಹಾಣ್, ರಮೇಶ್ ರಾಠೋಡ್ ಕಾರಬಾರಿ, ಲಾಲಪ್ಪ ರಾಥೋಡ್, ಕಿಶನ್ ನಾಯಕ್, ವಸಂತ ಚೌಹಾಣ್, ರಾಠೋಡ್ ರೇಣುಕಾ ರಾಥೋಡ್, ಸುನಿತಾ ಜಾಧವ್, ಕವಿತಾ ರಾಥೋಡ್, ಸಂಗೀತಾ ಚೌಹಾಣ್ ಲಲಿತಾಬಾಯಿ ರಾಥೋಡ್ ಮತ್ತಿತರು ಇದ್ದರು.