×
Ad

ಶಹಾಬಾದ್‌ | ಸಿ.ಎ ಇಂಗಿನಶೆಟ್ಟಿ ಕಾಲೇಜಿನಲ್ಲಿ ಬಿಳ್ಕೊಡುಗೆ ಸಮಾರಂಭ

Update: 2026-01-17 19:13 IST

ಶಹಾಬಾದ್‌ : ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಲು ಸಾಧ್ಯ. ಸಾಧನೆಗೆ ಪರಿಶ್ರಮವೇ ಹೊರತು ಅನ್ಯಮಾರ್ಗವಿಲ್ಲ ಎಂದು ಕಾಲೇಜಿನ ಉಪನ್ಯಾಸಕಿ ಶರಣಮ್ಮ ಕೊಳ್ಳಿ ಹೇಳಿದರು.

ಶಹಾಬಾದ್‌ ನಗರದ ಪ್ರತಿಷ್ಠಿತ ಶ್ರೀ ಸಿ.ಎ ಇಂಗಿನಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಅಂಕಗಳ ಜೊತೆಗೆ ಜೀವನದ ಮೌಲ್ಯಗಳು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ನಿರಾಶರಾಗಬಾರದು. ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಕಠಿಣ ಪರಿಸ್ಥಿತಿ ಎದುರಿಸುವ ಛಲ ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು ಎಂದರು.

ಸಂಸ್ಥೆಯ ಹಿರಿಯ ಉಪನ್ಯಾಸಕ ರಾಜಕುಮಾರ ಭಾಸದ್ಕರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಬಹಳ ಪ್ರಮುಖವಾಗಿರುತ್ತದೆ, ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು. ಸಕಾರಾತ್ಮಕ ಚಿಂತನೆಗಳು ಮೈಗೂಡಿಸಿಕೊಳ್ಳಬೇಕು, ಆತ್ಮವಿಶ್ವಾಸದಿಂದ ಮುನ್ನಡೆದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ದಿಲೀಪ್ ಎಲ್ ಶೆಟ್ಟಿ, ಸದಸ್ಯರಾದ ಅನಿಲ್ ಕುಮಾರ್ ಬೋರ್ಗೌಕರ್, ಎಸ್.ಜಿ.ವರ್ಮ ಹಿಂದಿ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಗುರುಗಳಾದ ಮಲ್ಲಿನಾಥ್ ಪಾಟೀಲ್, ಉಪನ್ಯಾಸಕರಾದ ಸಾಬಣ್ಣ ಗುಡ್ಲಾ, ಶರಣಪ್ಪ ಹಲಕರ್ಟಿ, ಪದ್ಮಶ್ರೀ ಜೋಶಿ, ದೀಪಾ, ಅಶ್ವಿನಿ ಮೋಹಿತೆ, ಸುಮರಾಣಿ ಗೌಳಿ, ವೀರಯ್ಯ ಹಿರೇಮಠ್, ಸುಗಯ್ಯ ಗಂಟೆ ಮಠ, ರಮೇಶ್ ಮಹೇಂದ್ರಕರ್ ಉಪಸ್ಥಿತರಿದ್ದರು.

ಗೌರಿ ಹಾಗೂ ರಿತಿಕಾ ನಿರೂಪಿಸಿದರು. ತನಾಜ್ ಸ್ವಾಗತಿಸಿದರು. ಸೀಮಾ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News